ಭಟ್ಕಳ (Bhatkal): ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು (Chariot Festival) ಭಾನುವಾರದಂದು ರಾಮನವಮಿಯ ಪರ್ವಕಾಲದಲ್ಲಿ ಸಹಸ್ರಾರು ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ಜರುಗಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ರಥಕಾಣಿಕೆಗಾಗಿ ಸರತಿಯ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ಶ್ರೀ ದೇವರಿಗೆ ಅರ್ಪಿಸಿದರು. ತಾಲೂಕಿನ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಊರುಗಳಿಂದ ಆಗಮಿಸಿದ ಸಹಸ್ರಾರು ಜನರು ಪೂಜೆ ಪುನಸ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಜೆ ೫ ಗಂಟೆಗೆ ರಥೋತ್ಸವಕ್ಕೆ (Chariot Festival) ಚಾಲನೆ ನೀಡಲಾಯಿತು. ಸಹಸ್ರಕ್ಕೂ ಅಧಿಕ ಭಕ್ತರ ಹರ್ಷೋದ್ಘಾರಗಳ ನಡುವೆ ರಾಮ ಭಕ್ತ ಹನುಮನ ರಥೋತ್ಸವ ಜರುಗಿತು.

ವಿಡಿಯೋ ಸಹಿತ ಇದನ್ನೂ ಓದಿ : Bhatkal Fair/ ಭಟ್ಕಳ ಜಾತ್ರೆಗೆ ಕ್ಷಣಗಣನೆ

ದೇವಸ್ಥಾನದ ಎದುರಿನಿಂದ ಮಹಾರಥವನ್ನು ಹೂವಿನ ಪೇಟೆ, ಮುಖ್ಯರಸ್ತೆ, ಮಾರಿಗುಡಿ, ಜನತಾ ಬ್ಯಾಂಕ್‌ ಮೂಲಕ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ಎಳೆಯಲಾಯಿತು. ಸಂಪ್ರದಾಯದಂತೆ ಜೈನ (Jain) ಹಾಗೂ ಮುಸ್ಲಿಂ (Muslim) ಕುಟುಂಬಕ್ಕೆ ಆಹ್ವಾನ ನೀಡಲಾಯಿತು. ಸಹಸ್ರಾರು ಭಕ್ತ ಸಮೂಹದ ಹರ್ಷೋದ್ಘಾರದ ಮಧ್ಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥವನ್ನ ಕಂಡು ಭಕ್ತರು ಪುನೀತರಾದರು. ಪ್ರಮುಖವಾಗಿ ಚಂಡೆ ವಾದ್ಯ, ತಟ್ಟಿರಾಯ, ಹುಲಿವೇಷವು ಬ್ರಹ್ಮರಥೋತ್ಸವದ ವಿಶೇಷ ಮೆರುಗು ತಂದವು. ರಥ ಹಿಂಬದಿಯಲ್ಲಿ ಯುವಕರಿಂದ ವಿಶೇಷ ಡಿ.ಜೆ. ನೃತ್ಯ (DJ dance) ಪ್ರಮುಖ ಆಕರ್ಷಣೆಯಾಗಿತ್ತು.

ಇದನ್ನೂ ಓದಿ : WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ

ಈ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ (Mankal Vaidya), ಪುತ್ರಿ ಬೀನಾ ವೈದ್ಯ ರಥೋತ್ಸವದಲ್ಲಿ ಪಾಲ್ಗೊಂಡು ರಥಾರೂಡನಾದ ಹನುಮಂತನ ದರ್ಶನ ಪಡೆದರು. ಬ್ಲಾಕ್‌ ಕಾಂಗ್ರೆಸ್ (Congress) ಅಧ್ಯಕ್ಷ  ವೆಂಕಟೇಶ ನಾಯ್ಕ, ಮಾಜಿ ಶಾಸಕ ಸುನೀಲ‌ ನಾಯ್ಕ(Ex MLA Sunil Naik), ಬಿಜೆಪಿ (BJP) ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ವಿಶ್ವ ಹಿಂದು ಪರಿಷತ್ (VHP) ಜಯಂತ ನಾಯ್ಕ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಶ್ರೀಧರ ಮೊಗೇರ, ಕಮಿಟಿ ಸರ್ವಸದಸ್ಯರು, ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ತಂಜೀಂ ಸಂಸ್ಥೆ (Tanzeem) ಅಧ್ಯಕ್ಷ ಇನಾಯತವುಲ್ಲಾ ಶಾಬಂದ್ರಿ ಮುಂತಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ : Bangaramakki/ ಬಂಗಾರಮಕ್ಕಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಭಟ್ಳಳ ಉಪವಿಭಾಗದ ಡಿವೈಎಸ್‌ಪಿ ಮಹೇಶ ಎಂ.ಕೆ. ನೇತೃತ್ವದಲ್ಲಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಐ.ಜಿ.ಪಿ. (IGP) ಕಚೇರಿ ಡಿವೈಎಸ್ಪಿ ಬೆಳ್ಳಿಯಪ್ಪ, ನಗರ, ಗ್ರಾಮೀಣ ಪೋಲಿಸ್ ಠಾಣೆ ಪಿಎಸ್‌ಐಗಳು, ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ (dog squad) ಬಂದೋಬಸ್ತನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : Bangaramakki/ “ಭಕ್ತರ ಪಾಲಿನ ಬಂಗಾರವೇ ಬಂಗಾರಮಕ್ಕಿ”

ನೀಲಗೋಡ ಯಕ್ಷೆ ಚೌಡೇಶ್ವರಿ ದೇವಿ ಪಾಲಕಿ ಸವಾರಿ ಭಾಗಿ : ಈ ವರ್ಷ ವಿಶೇಷವಾಗಿ ಭಟ್ಕಳ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವದಲ್ಲಿ ಹೊನ್ನಾವರದ (Honnavar) ನೀಲಗೋಡ ಕ್ಷೇತ್ರದ ಯಕ್ಷೆ ಚೌಡೇಶ್ವರಿ ದೇವಿಯ ಪಾಲಕಿಯೂ ಪಾಲ್ಗೊಂಡಿತ್ತು. ರಥೋತ್ಸವಕ್ಕೆ ಬಂದ ಭಕ್ತರು ದೇವಿಯ ದರ್ಶನ ಪಡೆದು ಕುಂಕುಮ ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾದರು.

ರಥೋತ್ಸವದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Poetry collection/ ಶಿರಾಲಿಯಲ್ಲೊಂದು ಚಿಕ್ಕ ಚೊಕ್ಕ ಕಾರ್ಯಕ್ರಮ