ಭಟ್ಕಳ : ಬೈಕ್ ನಲ್ಲಿ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಸರಗಳ್ಳರು ಬೈಕ್ ನಲ್ಲಿ ಬಂದು ಮಹಿಳೆಯೋರ್ವಳ ಬಂಗಾರದ ಮಾಂಗಲ್ಯ ಸರ ಕದ್ದು ಪರಾರಿಯಾದ ಘಟನೆ (Chain snatching) ಮುರುಡೇಶ್ವರ (Murdeshwar) ರಾಷ್ಟ್ರೀಯ ಹೆದ್ದಾರಿ (National Highway) ೬೬ರ ಬಸ್ತಿಮಕ್ಕಿ ಕ್ರಾಸ್ ನಲ್ಲಿರುವ ಮೂಕಾಂಬಿಕಾ ವಾಟರ್ ಸರ್ವಿಸ್ ಸಮೀಪ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರುಡೇಶ್ವರದ (Murudeshwar) ಬಸ್ತಿಮಕ್ಕಿ ನಿವಾಸಿ ನಾಗಮ್ಮ ಸುಕ್ರ ಮೊಗೇರ ಮಾಂಗಲ್ಯ ಸರ ಕಳಕೊಂಡವರು. ಇವರು ಮೀನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರು ಏ.೧೭ರಂದು ಮಧ್ಯಾಹ್ನ ವೇಳೆ ಮುರ್ಡೇಶ್ವರದ ಬಸ್ತಿಮಕ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಘಟನೆ ನಡೆದಿದೆ. ಬಸ್ತಿಮಕ್ಕಿಯಲ್ಲಿರುವ ಮೂಕಾಂಬಿಕಾ ವಾಟರ್ ಸರ್ವಿಸ್ ಹತ್ತಿರ ಎರಡು ಜನರು ಬೈಕನ್ನು ನಿಲ್ಲಿಸಿ ಹೆಲೈಟ್ ಹಾಕಿಕೊಂಡು ಬೈಕ ಮೇಲೆ ಕುಳಿತುಕೊಂಡಿದ್ದರು.
ಇದನ್ನೂ ಓದಿ : Pregnant cattle/ ಭಟ್ಕಳದಲ್ಲಿ ಅಮಾನುಷ ಕೃತ್ಯ
ಅವರುಗಳ ಪೈಕಿ ಒಬ್ಬನ ಕಪ್ಪು ಬಣ್ಣದ ಜಾಕೇಟ್ ಹಾಗೂ ಮತ್ತೊಬ್ಬ ಮಾಸಿದ ಹಸಿರು ಬಣ್ಣದ ಜಾಕೆಟ್ ಹಾಕಿಕೊಂಡಿದ್ದ. ಮಹಿಳೆ ನಾಗಮ್ಮ ತಮ್ಮ ಪಾಡಿಗೆ ನಡೆದುಕೊಂಡು ಅವರನ್ನು ಪಾಸ್ ಮಾಡಿಕೊಂಡು ಹೋದರು. ಮಹಿಳೆ ಮುಂದೆ ಹೋಗುತ್ತಿದ್ದಂತೆ ಆ ವ್ಯಕ್ತಿಗಳು ತಮ್ಮ ಬೈಕನ್ನು ಸ್ಟಾಟ್ ಮಾಡಿಕೊಂಡು ಹೆಲೈಟ್ ಹಾಕಿ ಮಹಿಳೆಯ ಮುಂದೆ ಬಂದು ಬೈಕನ್ನು ನಿಧಾನ ಮಾಡಿ ಬೈಕಿನ ಹಿಂಬದಿಯಲ್ಲಿ ಕುಳಿತುಕೊಂಡಿದ್ದವ ಮಹಿಳೆಯ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ವೇಗವಾಗಿ ಹೊನ್ನಾವರದ (Honnavar) ಕಡೆ ಬೈಕ್ ಚಲಾಯಿಸಿಕೊಂಡು ಹೋಗಿದ್ದಾರೆ (Chain snatching).
ಇದನ್ನೂ ಓದಿ : online game/ ಪಾನಿ ಪುರಿಗೆ ಇಲಿ ಪಾಷಾಣ ಸೇರಿಸಿ ತಿಂದ ಭಟ್ಕಳದ ಯುವಕ !
ಮಾಂಗಲ್ಯ ಸರ ಒಂದು ಎಳೆಯದಾಗಿದ್ದು, ಅಂದಾಜು ೨೦ ಗ್ರಾಂ ತೂಕದ್ದಾಗಿದೆ. ಅದಕ್ಕೆ ಎರಡು ಕೆಂಪು ಮಣಿ ಗುಂಡು ಇದ್ದು, ಅಂದಾಜು ಮೌಲ್ಯ 1 ಲಕ್ಷ ರೂಪಾಯಿ ಮೌಲ್ಯದ್ದಾಗಿದ್ದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Waqf Bill/ ಕರಾವಳಿ ಮುಸ್ಲಿಮರ ಒಗ್ಗಟ್ಟು ಪ್ರದರ್ಶನ