ಭಟ್ಕಳ (Bhatkal): ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಇದರ ವತಿಯಿಂದ ಏ.೨೬ ಮತ್ತು ೨೭ರಂದು ಭಟ್ಕಳದಲ್ಲಿ ಪ್ರಪ್ರಥಮ ಬಾರಿಗೆ ಅಂತರ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ (cricket tournament) ಮೀಡಿಯಾ ಕಪ್ (Media Cup)-೨೦೨೫ ಹಮ್ಮಿಕೊಳ್ಳಲಾಗಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಸಚಿವ ಮಂಕಾಳ ವೈದ್ಯ (Minister Mankal Vaidya) ಬಿಡುಗಡೆಗೊಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರ್ಡೇಶ್ವರದಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪತ್ರಕರ್ತರು ಎರಡು ದಿನಗಳ ಕಾಲ ಎಲ್ಲಾ ಜಂಜಾಟವನ್ನು ಮರೆತು ಕ್ರಿಕೆಟ್ ಪಂದ್ಯಾವಳಿಯನ್ನು (cricket tournament) ಆಡುತ್ತಿರುವದು ಸಂತೋಷಕರ. ಸದಾ ತಮ್ಮ ಕರ್ತವ್ಯದಲ್ಲಿ ಕಾರ್ಯನಿರತವಾಗಿರುವ ಪತ್ರಕರ್ತರು ಒಂದೆರಡು ದಿನ ಬಿಡುವು ಮಾಡಿಕೊಂಡು ಉಭಯ ಜಿಲ್ಲೆಯ ಪತ್ರಕರ್ತರೊಂದಿಗೆ ಸೇರಿ ಕ್ರೀಡೆಯಲ್ಲಿ ಪಾಲ್ಗೊಳ್ಳುವದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಭಟ್, ವಿಷ್ಣು ದೇವಾಡಿಗ, ಮೋಹನ ನಾಯ್ಕ, ರಾಮಚಂದ್ರ ಕಿಣಿ, ಶೈಲೇಶ ವೈದ್ಯ, ಪ್ರಸನ್ನ ಭಟ್, ಮಂಜುನಾಥ ನಾಯ್ಕ, ಉದಯ ನಾಯ್ಕ, ಅರ್ಜುನ್ ಮಲ್ಯ, ಭಾಸ್ಕರ ನಾಯ್ಕ ಇತರರು ಇದ್ದರು.
ಇದನ್ನೂ ಓದಿ : Honesty/ ರಸ್ತೆಯಲ್ಲಿ ಸಿಕ್ಕ ೨೦ ಲಕ್ಷ ರೂ. ಚಿನ್ನಾಭರಣ ಮರಳಿಸಿದ ಭಟ್ಕಳಿಗ
ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಎಸ್‌ಪಿ ಎಂ ನಾರಾಯಣ, ಅಪರ ಜಿಲ್ಲಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ, ಜಿ.ಪಂ ಇ.ಒ ಈಶ್ವರ ಕುಮಾರ ಕಾಂದೂ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ, ಎಸಿ ಕಾವ್ಯಾರಾಣಿ, ಡಿವೈಎಸ್‌ಪಿ ಮಹೇಶ ಎಂ, ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಜಾಲಿ ಪ.ಪಂ. ಅಧ್ಯಕ್ಷೆ ಅಫ್ಸಾ ಹುಝೈಪಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ, ಉಡುಪಿ (Udupi) ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಅಲೆವೂರು, ಉತ್ತರ ಕನ್ನಡ (Uttara Kannada) ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ, ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಝಾ ಮಾನ್ವಿ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ : car collision/ ಕಾರು ಡಿಕ್ಕಿಯಾಗಿ ಬೈಕ್ ಸವಾರರಿಬ್ಬರಿಗೆ ಗಾಯ