ಭಟ್ಕಳ (Bhatkal) : ಗಾಣಿಗ ಸಮಾಜ (Ganiga Community) ಚಿಕ್ಕ ಸಮಾಜವಾದರು ದೊಡ್ಡ ಕೆಲಸ ಮಾಡಿದ್ದಾರೆ. ಒಂದು ದೇವಸ್ಥಾನದ ನಿರ್ಮಾಣಕ್ಕೆ ಸಂಖ್ಯೆ ಮುಖ್ಯ ಅಲ್ಲ, ಯೋಗ್ಯತೆ ದೊಡ್ಡದು. ಹನುಮಂತ ದೇವ ನಿಮ್ಮ ಮ‌ೂಲಕ ಈ ಕಾರ್ಯವನ್ನು (Hanuman idol) ಮಾಡಿಸಿದ್ದಾನೆ‌ ಎಂದು ರಾಮಚಂದ್ರಾಪುರ ಮಠದ (Ramachandrapur Math) ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ (Raghaveshwar Bharati Shree) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಇಲ್ಲಿನ ಮಣ್ಕುಳಿ ಶ್ರೀ ಹನುಮಂತ ಮತ್ತು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವ (Brahma Kalashotsav) ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮದ ಅಂಗವಾಗಿ ೪೧ ಅಡಿ ಬೃಹತ್ ಹನುಮಂತ ಮೂರ್ತಿ (Hanuman idol) ಲೋಕಾರ್ಪಣೆ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ರಾಮಾಯಣದಲ್ಲಿ (Ramayan) ಲಂಕೆಗೆ ಹೋಗಿ ಜಾಲಾಡಿ ಲಂಕೆಗೆ ಬೆಂಕಿ ಇಟ್ಟು ಬಂದವನು ಹನುಮಂತನೊಬ್ಬನೇ. ರಾಕ್ಷಸನ ನೆಲೆಯನ್ನು ಒಬ್ಬನೇ ಎದುರಿಸಿ ಅವರೆಲ್ಲರನ್ನು ಮೆಟ್ಟಿ ನಿಂತೆ ಎಂದು ಸೀತೆ ಅಭಿನಂದಿಸಿದ್ದಳು. ನಿಮ್ಮಲ್ಲಿಯೂ ಸಹ ಹನುಮಂತನ ಆವ್ವಾಹನೆ ಆಗಿದೆ. ಇಂತಹ ದೊಡ್ಡ ಮಹತ್ಕಾರ್ಯ ಮಾಡಲು ಪ್ರೇರಣೆ ಮತ್ತು ಶಕ್ತಿಯಾಗಿ ಹನುಮಂತ ನಿಮ್ಮೆಲ್ಲರೊಟ್ಟಿಗೆ ನಿಂತಿದ್ದಾನೆ. ಇದರಿಂದ ಸಮಾಜದಲ್ಲಿ ಒಂದು ಆತ್ಮ ವಿಶ್ವಾಸ ವೃದ್ಧಿಸಿದಂತಾಗಿದೆ ಎಂದರು.

ಇದನ್ನೂ ಓದಿ : Punar Pratistha/ ಶಿಲಾಮಯ ದೇಗುಲದಲ್ಲಿ ಪುನರ್‌ ಪ್ರತಿಷ್ಠಾ ಕಾರ್ಯಕ್ರಮ

ಭಟ್ಕಳದ ೮ ದಿಕ್ಕಿನಲ್ಲಿ ಹನುಮಂತ ನೆಲೆ ನಿಂತಿದ್ದಾನೆ. ಅದರಲ್ಲೂ ಜೈನ ಮತಕ್ಕೆ ಸೇರಿದ ರಾಣಿ ಚೆನ್ನಬೈರಾದೇವಿಯು (Rani Chennabhairadevi) ೮ ದಿಕ್ಕಿನಲ್ಲಿ ೮ ಹನುಮಂತ ಮೂರ್ತಿಯನ್ನು ಸ್ಥಾಪಿಸಿದ್ದ ಹಿನ್ನೆಲೆ ನೋಡಿದರೆ ಸಂತಸವಾಗುತ್ತದೆ. ಈ ಮಣ್ಕುಳಿಯ ಹನುಮಂತ ವಿಶೇಷ ಎಂದರೆ ಈಶಾನ್ಯ ದಿಕ್ಕಿನ ಹನುಮಂತ. ಈಶಾನ್ಯ ದಿಕ್ಕು ಶ್ರೇಷ್ಠ ಸಂಪೂರ್ಣ ಶುಭದ ದಿಕ್ಕು. ಇದು ಈಶ್ವರನ ಸಾನಿಧ್ಯ ಇರುವ ದಿಕ್ಕು. ಅದರಲ್ಲೂ ಬಲಗೈ ಎತ್ತಿದ ಹನುಮಂತ ಅಭಯ ಮುದ್ರೆಯ ಸ್ವರೂಪದಲ್ಲಿದ್ದಾನೆ. ಹಾಗಾಗಿ ಸದಾ ಭಕ್ತರನ್ನು ಅಭಯವಾಗಿ ಕಾಪಾಡುತ್ತಾನೆ ಎಂದರ್ಥ ಎಂದು ಶ್ರೀಗಳು ಆಶೀರ್ವದಿಸಿದರು.

ಇದನ್ನೂ ಓದಿ : accused arrested/ ೧೫ ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಬಂಧನ

ದೇವಸ್ಥಾನದ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಸುಭಾಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ,  ರಸ್ತೆಯಲ್ಲಿ ತೆರಳುವವರಿಗೆ ಈ ೪೧ ಅಡಿ ವಿಗ್ರಹ ಆಕರ್ಷಣೆಯ ಜೊತೆಗೆ ಶಕ್ತಿ ಕೇಂದ್ರವಾಗಿದೆ. ಈಶಾನ್ಯ ದಿಕ್ಕಿನಲ್ಲಿನ ಮಣ್ಕುಳಿಯ ಹನುಮಂತ ನಮ್ಮ ದೇವರು. ಕೇವಲ ಗಾಣಿಗ ಸಮಾಜದಿಂದ ಆಗಿರದೇ ಎಲ್ಲಾ ಸಮಾಜದ ಸಹಕಾರದಿಂದ ಈ ಮಹತ್ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ಇದನ್ನೂ ಓದಿ : Murdeshwar/ ಮುರ್ಡೇಶ್ವರದ ವ್ಯಕ್ತಿಯ ಹಣ ದೋಚಿದ ಕಳ್ಳರು

ಇದಕ್ಕೂ ಪೂರ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ಭಟ್ಟ ಗಣಪತಿಯನ್ನು ಸ್ತುತಿ ಉಚ್ಛರಿಸಿದರರು. ದೇವಸ್ಥಾನ ಸ್ವಾಗತ ಸಮಿತಿ ಸದಸ್ಯ ಮನೋಜ ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಮಹೇಶ ಶೆಟ್ಟಿ ಗೋಕರ್ಣ, ನಾರಾಯಣ ಶೆಟ್ಟಿ, ಆನಂದ ಶೆಟ್ಟಿ, ಶಿವರಾಮ ಶೆಟ್ಟಿ, ಗಜಾನನ ಶೆಟ್ಟಿ, ನಾರಾಯಣ ಶೆಟ್ಟಿ ಅರುಕಿ, ಸುಬ್ರಹ್ಮಣ್ಯ ಎನ್. ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ : foundation day/ ಕಸಾಪ ಸಂಸ್ಥಾಪನಾ ದಿನಾಚರಣೆ