ಭಟ್ಕಳ (Bhatkal) : ಟಾಟಾ ಇಂಟ್ರಾ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದು (scooty accident) ಯುವತಿಯರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಅನಫಾಲ್ ಸೂಪರ್ ಮಾರ್ಕೆಟ್ ಎದುರಿಗೆ ಮೇ ೧೧೧ರಂದು ರಾತ್ರಿ ೧೧.೪೦ರ ಸುಮಾರಿಗೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸ್ಕೂಟಿ ಚಲಾಯಿಸುತ್ತಿದ್ದ ಹಾವೇರಿ (Haveri) ಜಿಲ್ಲೆಯ ಹಾನಗಲ್ (Hangal) ತಾಲೂಕಿನ ಮಂತಗಿ ಮೂಲದ ರೇಣುಕಾ ವಿಕ್ರಮ ಪೂಜಾರ ಮತ್ತು ಹಿಂಬದಿ ಸವಾರರಾಗಿದ್ದ ಕುಮಟಾ ತಾಲೂಕಿನ ಹಿರೇಗುತ್ತಿ ಮೂಲದ ಗಾಯತ್ರಿ ಸುಧಾಕರ ಹಳ್ಳೇರ ಗಾಯಗೊಂಡವರು. ಇಬ್ಬರೂ ತಮ್ಮ ಕೆಲಸ ಮುಗಿಸಿ ತಮ್ಮ ರೂಮಿನ ಕಡೆಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಟಾಟಾ ಇಂಟ್ರಾ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಭಟ್ಕಳ ಸಂಶುದ್ದೀನ್ ಸರ್ಕಲ್ ಕಡೆಯಿಂದ ಹೋಗುತ್ತಿದ್ದ ಸ್ಕೂಟಿ ಅನಫಾಲ್ ಸೂಪರ್ ಮಾರ್ಕೆಟ್ ಎದುರಿಗೆ ಬಲಕ್ಕೆ ತಿರುಗಿಸಿದಾಗ ಎದುರಿನಿಂದ ವೇಗವಾಗಿ ಬರುತ್ತಿದ್ದ ಟಾಟಾ ಇಂಟ್ರಾ ಡಿಕ್ಕಿ ಹೊಡೆದಿದೆ (scooty accident) ಎಂದು ದೂರಲಾಗಿದೆ. ರೇಣುಕಾ ಪೂಜಾರ ತಂದೆ ವಿಕ್ರಮ ಭಟ್ಕಳ ಶಹರ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ.
ಇದನ್ನೂ ಓದಿ : Sentence announced/ ನಾಲ್ವರನ್ನು ಹತ್ಯೆಗೈದ ಆರೋಪಿಗಳಿಗೆ ಶಿಕ್ಷೆ ಪ್ರಕಟ