ಭಟ್ಕಳ (Bhatkal) : ಇಲ್ಲಿನ ವಿಶ್ವಕರ್ಮ ಗೆಳೆಯರ ಬಳಗದ ಆಶ್ರಯದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್ ನ ವಿಶ್ವಕರ್ಮ ಟ್ರೋಫಿ -೨೦೨೫ (vishwakarma trophy) ಪಂದ್ಯಾವಳಿಯು ಇತ್ತೀಚೆಗೆ ಭಟ್ಕಳ ತಾಲೂಕಿನ ಶಿರಾಲಿಯ ತಟ್ಟಿಹಕ್ಕಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರೂರಿನಿಂದ ಕುಮಟಾ (Kumta) ದವರೆಗಿನ ವಿಶ್ವಕರ್ಮ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಫೈನಲ್ ಪಂದ್ಯದಲ್ಲಿ ರಾಜು ಬಾಯ್ಸ್ ತಂಡ ಪ್ರಥಮ ಬಹುಮಾನ ಹಾಗೂ ಟ್ರೋಫಿಯೊಂದಿಗೆ (vishwakarma trophy) ವಿಜಯ ಶಾಲಿಯಾಯಿತು (winner). ರೋಚಕ ಪಂದ್ಯದಲ್ಲಿ ಎಸ್.ಪಿ. ಸ್ಟ್ರೈಕರ್ಸ್ ದ್ವಿತೀಯ ಬಹುಮಾನ (runner up) ಪಡೆಯಿತು.
ಇದನ್ನೂ ಓದಿ : black belt / ಬ್ಲ್ಯಾಕ್ ಬೆಲ್ಟ್ ಪ್ರದಾನ
ಫೈನಲ್ ಪಂದ್ಯದಲ್ಲಿ ರಾಜು ಬಾಯ್ಸ್ ತಂಡದ ಸಚಿನ್ ಆಚಾರ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಎಸ್.ಪಿ. ಸ್ಟ್ರೈಕರ್ಸ್ ತಂಡದ ಚಂದ್ರಹಾಸ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು. ಅದೇ ತಂಡದ ನಾಗೇಂದ್ರ ಆಚಾರ್ಯ ಉತ್ತಮ ಬೌಲರ್ ಪ್ರಶಸ್ತಿ ಗೆ ಆಯ್ಕೆಯಾದರು. ಎಸ್.ಪಿ. ಸ್ಟ್ರೈಕರ್ಸ್ ತಂಡದ ಚಂದ್ರಹಾಸ ಸರಣಿ ಶ್ರೇಷ್ಠ ಪ್ರಶಸ್ತಿ ಗೆ ಆಯ್ಕೆಯಾದರು. ಕಾಸ್ಮುಡಿ ಕ್ರಿಕೆಟ್ ಟೀಮ್ ಶಿಸ್ತಿನ ತಂಡ ಪ್ರಶಸ್ತಿಗೆ ಆಯ್ಕೆಯಾದರು.
ಇದನ್ನೂ ಓದಿ : police raid/ ಇಬ್ಬರ ಬಂಧನ; ನಾಲ್ವರು ಪರಾರಿ
ಕ್ರಿಕೆಟ್ ಪ್ರೇಮಿಗಳು (cricket lovers) ಹಾಗೂ ಸಮಾಜ ಬಂಧುಗಳು ಸಹಕಾರ ನೀಡಿದ್ದು ಪಂದ್ಯಾವಳಿಯ ಯಶಸ್ಸಿಗೆ ಕಾರಣವಾಯಿತು. ಸಮಾಜದ ಮುಖಂಡರಾದ ಗಜಾನನ ಎನ್. ಆಚಾರ್ಯ ವೆಂಕಟಾಪುರ, ಗೋವಿಂದ ಆಚಾರ್ಯ ಕವೂರು, ರೋಹಿತ್ ಜೆ. ಆಚಾರ್ಯ ಶಿರಾಲಿ, ಗುಡಿಗದ್ದೆ ವಿಶ್ವಕರ್ಮ ಪ್ರರಬ್ರಹ್ಮ ಕ್ಷೇತ್ರದ ಗಂಗಾಧರ ಪುರೋಹಿತ, ಕೇಶವ ಎ. ಆಚಾರ್ಯ ಸುಭಾಷ ನಗರ, ಸುಬೋಧ ಎಸ್ ಆಚಾರ್ಯ ಜಾಲಿ, ಜಗದೀಶ ಆಚಾರ್ಯ ಮುರ್ಡೇಶ್ವರ (Murdeshwar), ವೆಂಕಟರಮಣ ಆಚಾರ್ಯ ತೆರ್ನಮಕ್ಕಿ ಉಪಸ್ಥಿತರಿದ್ದರು. ವಿಶ್ವಕರ್ಮ ಗೆಳೆಯರ ಬಳಗ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಶ್ರಮವಹಿಸಿತ್ತು.
ಇದನ್ನೂ ಓದಿ : scooty accident/ ಸ್ಕೂಟಿ ಅಪಘಾತದಲ್ಲಿ ಯುವತಿಯರಿಬ್ಬರಿಗೆ ಗಾಯ