ಶಿರಸಿ (Sirsi) : ವೇಗವಾಗಿ ಬಂದ ಟ್ರ್ಯಾಕ್ಸ್ ವಾಹನ ಕಾರಿಗೆ ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡಿರುವ ಬಗ್ಗೆ ಶಿರಸಿ (Sirsi) ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಟ್ರ್ಯಾಕ್ಸ್ ಚಾಲಕ ಮಹಾವೀರ ಸೋಮರಾಯಪ್ಪ ದೇವಕ್ಕಿ ವಿರುದ್ಧ ಕಾರು ಚಾಲಕ ಮುರ್ಡೇಶ್ವರದ (Murdeshwar) ಬಸ್ತಿ ನಿವಾಸಿ ಸಾಗರ ಪಾಂಡುರಂಗ ನಾಯ್ಕ ದೂರು ದಾಖಲಿಸಿದ್ದಾರೆ. ಶಿರಸಿ-ಹುಬ್ಬಳ್ಳಿ (Hubballi) ರಸ್ತೆಯಲ್ಲಿ ಶಿರಸಿಯ ವಾಕರಸಾ ಸಂಸ್ಥೆಯ (NWKRTC) ಡಿಪೋ ಬದಿಯಿಂದ ಚಿಪಗಿ ಚೆಕಪೋಸ್ಟ್ ಬದಿಗೆ ಹೋಗಲು ವೇಗವಾಗಿ ಬಂದ ಟ್ರ್ಯಾಕ್ಸ್ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ. ಚಿಪಗಿ ಬದಿಯಿಂದ ಶಿರಸಿ ನಗರದ ಕಡೆಗೆ ಬರುತ್ತಿದ್ದ ಕಾರಿನ ಬಲಬದಿಯ ಎರಡು ಬಾಗಿಲಿಗೆ ಮತ್ತು ಹಿಂಬದಿ ಬಂಪರಿಗೆ ಟ್ರ್ಯಾಕ್ಸ್ ಡಿಕ್ಕಿಹೊಡೆದಿದೆ. ಅಲ್ಲದೆ ಟ್ರ್ಯಾಕ್ಸ್ಗೂ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Head-on collision/ ಕಾರವಾರ ಬಾಲಕಿ ಸಹಿತ ನಾಲ್ವರಿಗೆ ಗಾಯ