ಭಟ್ಕಳ : ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ರಾಜಾಂಗಣದ ಮುಖ್ಯ ರಸ್ತೆಯಲ್ಲಿರುವ ನಾಗಬನ ಶ್ರೀ ನಾಗ ಮತ್ತು ಶ್ರೀ ಜೈನ ನಾಗಯಕ್ಷೆ ದೇವರುಗಳ ಪುನರ್ ಪ್ರತಿಷ್ಠೆಯ ಪ್ರಥಮ ವರ್ಷದ ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವ ಇಂದು (ಫೆ.೨೯) ಸಾಂಗವಾಗಿ ನೆರವೇರಿತು.

ಇದನ್ನೂ ಓದಿ :  ಭೀಕರ ಅಪಘಾತದಲ್ಲಿ ತಾಯಿ-ಮಗಳು ದುರ್ಮರಣ


೫೦೦ ವರ್ಷಗಳ ಇತಿಹಾಸ ಹೊಂದಿರುವ ನಾಗಬನ ಶ್ರೀ ದೇವರ ವರ್ಧಂತ್ಯೋತ್ಸವಕ್ಕೆ ಭಟ್ಕಳ ತಾಲೂಕಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಶ್ರೀ ದೇವರಿಗೆ ಪೂಜೆ, ಹಣ್ಣುಕಾಯಿ ಸೇವೆ ಸಲ್ಲಿಸಿ ಕೃತಾರ್ಥರಾದರು. ಅಳ್ವೆಕೋಡಿ ಮಹಿಳಾ ಭಜನಾ ಮಂಡಳಿಯವರು ಭಜನಾ ಕುಣಿತ ಸೇವೆ ಸಲ್ಲಿಸಿದರು. ಮಾಜಿ ಶಾಸಕ ಸುನೀಲ ನಾಯ್ಕ ಸೇರಿದಂತ ತಾಲೂಕಿನ ಗಣ್ಯರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಮಹಾಪೂಜೆ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.


ಈ ಕ್ಷೇತ್ರಪಾಲವು ಸುಮಾರು 500 ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ. ಕಾಲಾನಂತರದಲ್ಲಿ ಕ್ಷೇತ್ರದ ವೈಭವವನ್ನೇ ಕಳೆದುಕೊಂಡಂತಾಗಿತ್ತು.
ತದನಂತರ ಕ್ಷೇತ್ರದ ಗತಸ್ಥಿತಿಯನ್ನು  ನೋಡಿ ಭಕ್ತರು ಶ್ರೀ ರಾಜಾಂಗಣ ನಾಗಬನ ಅಭಿವೃದ್ಧಿ ಸಮಿತಿ ರಚಿಸಿ ಜೀರ್ಣೋದ್ಧಾರಕ್ಕೆ ಮುನ್ನುಡಿ ಬರೆದರು. ಶ್ರೀ ಕ್ಷೇತ್ರದ ಕಳೆ ಬರಹಗಳನ್ನು ಕಲೆಹಾಕಿ ಶ್ರೀ ಕ್ಷೇತ್ರಕ್ಕೆ ಕಳೆ ಕೊಟ್ಟು, ಕಳೆದ ವರ್ಷ ಶ್ರೀ ದೇವರುಗಳ ಪುನರ್ ಪ್ರತಿಷ್ಠೆ ಮಾಡಲಾಗಿದೆ.

ಸರ್ಕಾರಿ ನೌಕರರ ವಾಲಿಬಾಲ್ ಪಂದ್ಯಾವಳಿ : https://fb.watch/qw98nJgTz8/?mibextid=Nif5oz