ಕುಮಟಾ (Kumta): ತನ್ನ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಾಗ ತೋಟದಲ್ಲಿರುವ ತೆರೆದ ಬಾವಿಗೆ ಬಿದ್ದು ಕೃಷಿಕ ಮೃತಪಟ್ಟಿದ್ದಾನೆ (Farmer death).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕುಮಟಾ ತಾಲೂಕಿನ ಕೂಜಳ್ಳಿಯ ಬಚಕಂಡ ನಿವಾಸಿ ರಾಘವೇಂದ್ರ ವಿದ್ಯಾಧರ ಭಟ್ಟ (೪೨) ಮೃತ ದುರ್ದೈವಿ . ನಿನ್ನೆ ನ.೭ರಂದು ಬೆಳಿಗ್ಗಿ ೮.೩೦ರಿಂದ ಮಧ್ಯಾಹ್ನ ೨ ಗಂಟೆ ನಡುವಿನ ಅವಧಿಯಲ್ಲಿ ದುರ್ಘಟನೆ ನಡೆದಿದೆ. ಕಾಲು ಜಾರಿ ಅಥವಾ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ (Farmer death) ಎಂದು ಮೃತರ ಚಿಕ್ಕಪ್ಪ ಕೃಷ್ಣ ಭಟ್ಟ ದೂರಿನಲ್ಲಿ (complaint) ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಕುಮಟಾ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ :  ನಾಳೆ ಜಿಲ್ಲಾ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆ