ಭಟ್ಕಳ (Bhatkal): ಇಲ್ಲಿನ ಪ್ರತಿಷ್ಠಿತ ಐಸಿಎಸ್ಇ (ICSE) ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ (Vidyanjali Public School) ಶನಿವಾರ ಫೆಬ್ರವರಿ ೧೫ರಂದು ವೈಬ್ರೆಂಟ್ ವಿದ್ಯಾಂಜಲಿ-೨೦೨೫ ಎನ್ನುವ ಶೀರ್ಷಿಕೆಯೊಂದಿಗೆ ಮಕ್ಕಳ ಹಬ್ಬ (Childrens Festival) ನಡೆಯಿತು. ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಜ್ಜಾನ, ರೋಬೊಟಿಕ್ಸ, ಗಣಿತ, ಕಂಪ್ಯೂಟರ ವಿಷಯದ ಮಾದರಿ, ವಸ್ತು ಪ್ರದರ್ಶನ ಹಾಗೂ ಮಕ್ಕಳಿಗೆ ವ್ಯವಹಾರಿಕ ಜ್ಜಾನದ ತಿಳುವಳಿಕೆಗಾಗಿ ಮಕ್ಕಳ ಸಂತೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮವನ್ನು ಉದ್ಘಾಟಿಸಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟ ನ ಚೇರಮನ್ ಡಾ.ಸುರೇಶ ನಾಯಕ ಮಾತನಾಡಿ, ಮಕ್ಕಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಹಾಗೂ ವ್ಯವಹಾರಿಕ ಜ್ಜಾನಕ್ಕೆ ಒತ್ತು ಕೊಡುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮಕ್ಕೆ (Childrens Festival)  ಟ್ರಸ್ಟಿಗಳಾದ ರಾಜೇಶ ನಾಯಕ, ರವೀಂದ್ರ ಕೊಲ್ಲೆ, ನಾಗೇಶ ಭಟ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಬಂದು ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹಿಸಿದರು. ಮಕ್ಕಳ ಸಂತೆಯಲ್ಲಿ ತರಕಾರಿ, ಕಿರಾಣಿ, ಬೇಕರಿ, ತಂಪು ಪಾನೀಯ, ಹಣ್ಣು, ಅಲಂಕಾರಿಕ ವಸ್ತುಗಳು, ಮೆಹಂದಿ ಮುಂತಾದ ಅಂಗಡಿಗಳು ಪಾಲಕರ ಮೆಚ್ಚುಗೆಗೆ ಪಾತ್ರವಾಯಿತು.

ಇದನ್ನೂ ಓದಿ : Vardhanthi/ ನಾಗಬನ ದೇವರ ದ್ವಿತೀಯ ವರ್ಧಂತಿ