ಭಟ್ಕಳ(Bhatkal) : ಓಸಿ ಮಟಕಾ (OC Mataka) ಆಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದ ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು (Case Registered) ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಹುರುಳಿಸಾಲ ಕಾರಗದ್ದೆ ನಿವಾಸಿ ರಾಘವೇಂದ್ರ ರಾಮ ನಾಯ್ಕ (೩೩) ಆರೋಪಿ. ಇವರು ಸೆ.೫ರಂದು ಸಂಜೆ ೪.೩೦ರ ಸುಮಾರಿಗೆ ಭಟ್ಕಳ ಶಹರ ಸಂಶುದ್ದೀನ್‌ ವೃತ್ತದ ಬಳಿ ಓಸಿ ನಂಬರ್‌ ಬರೆದುಕೊಡುತ್ತಿರುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಪಿಎಸೈ ನವೀನ್‌ ಎಸ್.‌ ನಾಯ್ಕ ಆರೋಪಿಯನ್ನು  ೩೮೭೦ ರೂ. ನಗದು ಸಹಿತ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಹೆದ್ದಾರಿ ಪಕ್ಕ ನಿಂತಿದ್ದ ವ್ಯಕ್ತಿಗೆ ಬೈಕ್‌ ಡಿಕ್ಕಿ