ಚಿಕ್ಕಮಗಳೂರು (Chikkamagaluru) : ಎನ್ ಆರ್ ಪುರ (NR Pura) ತಾಲೂಕಿನ ರಾಜೀವ್ ನಗರದಲ್ಲಿ ೧೪ ವರ್ಷಗಳಿಂದ ಎಲ್ಲ ಧರ್ಮದವರು ಒಟ್ಟಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ (Communal harmony). ವಿನಾಯಕ ಸೇವಾ ಸಮಿತಿ ರಚಿಸಿಕೊಂಡು ೩ ದಿನಗಳ ಕಾಲ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷ ಗಣೇಶೋತ್ಸವ ನಡೆದಿರಲಿಲ್ಲ. ಈ ವರ್ಷ ಪುನಃ ಎಲ್ಲ ಧರ್ಮದವರು ಒಟ್ಟಾಗಿ ಗಣೇಶೋತ್ಸವ ಆಚರಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎನ್ ಆರ್ ಪುರದ ಗಣಪತಿ ಸಮಿತಿಗೆ ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದಾ ೧೪ ವರ್ಷದಿಂದಲೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ವರ್ಷ ಕಾರಣಾಂತರದಿಂದ ಗಣೇಶೋತ್ಸವ ನಡೆದಿರಲಿಲ್ಲ. ಮುಸ್ಲಿಂ ಬಾಹುಳ್ಯ ಇರುವ ರಾಜೀವ ನಗರದಲ್ಲಿ ಈ ಬಾರಿ ಗಣೇಶೋತ್ಸವ ಆಚರಣೆಗೆ ನಿರ್ಧರಿಸಲಾಯಿತು. ಅಂತೆಯೇ ಎಲ್ಲ ಸಮಾಜದವರು ಒಟ್ಟಾಗಿ ಮೂರು ದಿನ ವಿಜೃಂಭಣೆಯಿಂದ ಗಣೇಶನನ್ನು ಪೂಜಿಸಿದ್ದಾರೆ.

ಇದನ್ನೂ ಓದಿ :  ಶರಾವತಿ ಉದ್ದೇಶಿತ ಯೋಜನೆಗಳ ವಿರುದ್ಧ ಹೋರಾಟಕ್ಕೆ ಸಜ್ಜು

ಈ ವರ್ಷವೂ ಎಲ್ಲರ ಒತ್ತಾಯದ ಮೇರೆಗೆ ಪುನಃ ಅಧ್ಯಕ್ಷರಾಗಿ ಆಯ್ಕೆಯಾಗಿ ಗಣೇಶೋತ್ಸವದ ನೇತೃತ್ವ ವಹಿಸಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಜುಬೇದಾ ತಮ್ಮ ವೈಯಕ್ತಿಕ ಬದುಕನ್ನು ಸಾರ್ವಜನಿಕ ಜೀವನಕ್ಕಾಗಿ ಮುಡುಪಾಗಿಟ್ಟವರು. ಈ ಗಣೇಶ ಸಮಿತಿಯಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಸದಸ್ಯರಿದ್ದಾರೆ. ಎಲ್ಲರೂ ಒಟ್ಟಾಗಿ ಹಿಂದೂ ಸಂಪ್ರದಾಯದಂತೆ ೩ ದಿನಗಳ ಕಾಲ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಗಣಪತಿ ವಿಸರ್ಜನೆ ನಡೆಸಿ ಕೋಮು ಸೌಹಾರ್ದತೆಗೆ (Communal harmony) ಮಾದರಿಯಾಗಿದ್ದಾರೆ.

ಇದನ್ನೂ ಓದಿ : ಸತತ ೩ನೇ ಬಾರಿ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿಗೆ ಸಮಗ್ರ ವೀರಾಗ್ರಣಿ