ಭಟ್ಕಳ: ತಾಲೂಕಿನ ಮೂಡಶಿರಾಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಡೀ ಕಟ್ಟಡಕ್ಕೆ ‘ವಿದ್ಯಾವಾಹಿನಿ ಎಕ್ಸ್‌ಪ್ರೆಸ್’ (Vidya Vahini Express) ಎಂಬ ರೈಲಿನ ಮಾದರಿಯ ಪೇಂಟಿಂಗ್ ಮಾಡಲಾಗಿದ್ದು, ಇದು ನೋಡುಗರ ಗಮನ ಸೆಳೆಯುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶುಕ್ರವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಟ್ಕಳ (Bhatkal) ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯ್ಕ,  ಶಾಲೆಯ ವಿನೂತನ ಮಾದರಿಯ ಕಟ್ಟಡವಾದ ‘ವಿದ್ಯಾವಾಹಿನಿ ಎಕ್ಸ್‌ಪ್ರೆಸ್’ ಗೆ (Vidya Vahini Express) ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, ರೈಲಿನ ಮಾದರಿಯಲ್ಲಿರುವ ಶಾಲಾ ಕಟ್ಟಡವು ಆಕರ್ಷಕವಾಗಿದ್ದು, ಮಕ್ಕಳನ್ನು ಶಾಲೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂತಹ ಸೃಜನಾತ್ಮಕ ಪ್ರಯತ್ನಗಳು ನಮ್ಮ ಶಿಕ್ಷಣ ಇಲಾಖೆಗೆ ಹೆಮ್ಮೆ ತಂದಿವೆ ಎಂದು ಕೊಂಡಾಡಿದರು.

government school/ ಮೂಡಶಿರಾಲಿಯ ಸರಕಾರಿ ಶಾಲೆಯಲ್ಲಿ ಸಂಭ್ರಮ 

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಖಾಸಗಿ ಶಾಲೆಗಳತ್ತ ಮುಗಿಬೀಳುತ್ತಿರುವ ಸಂದರ್ಭದಲ್ಲಿ, ಮೂಡಶಿರಾಲಿಯ ಗ್ರಾಮಸ್ಥರು ಮಾತ್ರ ತಮ್ಮ ಊರಿನ ಸರಕಾರಿ ಶಾಲೆಯನ್ನು ಕೇವಲ ಕಟ್ಟಡವೆಂದು ನೋಡದೆ ಅದನ್ನು “ಅಕ್ಷರ ದೇಗುಲ”ದಂತೆ ಪೂಜಿಸುತ್ತಿರುವುದು ವಿಶೇಷ. ಊರಿನ ಜನರ ಈ ಅಪಾರ ಪ್ರೀತಿ ಮತ್ತು ಸಹಕಾರವೇ ಶಾಲೆಯ ಇಂದಿನ ಈ ಅಭಿವೃದ್ಧಿಗೆ ಬುನಾದಿಯಾಗಿದೆ.

bike rally/ ‘ನಗರ ಹಿಂದೂ ಸಂಗಮ’ ಅಂಗವಾಗಿ ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ಅಂದಹಾಗೆ ರಾಜ್ಯಮಟ್ಟದ ‘ಪುಷ್ಠಿ ಯೋಜನೆ’ ಅಡಿಯಲ್ಲಿ ‘ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಈ ಶಾಲೆ ಆಯ್ಕೆಯಾಗಿದೆ. ಒಂದು ಪುಟ್ಟ ಹಳ್ಳಿಯ ಸರಕಾರಿ ಶಾಲೆ ಇಂದು ತನ್ನ ವಿನೂತನ ರೂಪದಿಂದ ಇಡೀ ಜಿಲ್ಲೆಗೆ ಮಾದರಿಯಾಗಿ ನಿಂತಿದೆ.

Police parade/ ಹಿಂದೂ ಸಮಾಜೋತ್ಸವ ಹಿನ್ನೆಲೆ ಭಟ್ಕಳದಲ್ಲಿ ಪೊಲೀಸ್ ಪರೇಡ್