ಭಟ್ಕಳ (Bhatkal) : ತಾಲೂಕಿನಲ್ಲಿ ಪ್ರಸ್ತುತ ಪ್ರತಿಶತ ೬೭.೮೮% ಕೃಷಿ ಜಮೀನಿನ ಪ್ಲಾಟುಗಳಿಗೆ ಆಧಾರ ಜೋಡಣೆ (Aadhar link) ಮಾಡಲಾಗಿದೆ. ಇನ್ನು ೭೨೮೮೮ ಕೃಷಿ ಪ್ಲಾಟುಗಳಿಗೆ ಆಧಾರ ಜೋಡಣೆ ಮಾಡಲು ಬಾಕಿ ಇದೆ. ಕೂಡಲೆ ಆಯಾ ಗ್ರಾಮ ಆಡಳಿತ ಅಧಿಕಾರಿಯನ್ನು ಸಂಪರ್ಕಿಸಿ ಪಹಣಿಗೆ ಆಧಾರ ಜೋಡಣೆ ಮಾಡಿಸಿಕೊಳ್ಳಲು ಭಟ್ಕಳ ತಹಸೀಲ್ದಾರರು ವಿನಂತಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಲಿಂಕ್ ಮಾಡಿಸುವುದು ಹೇಗೆ?: ತಾಲೂಕಿನಲ್ಲಿ ಬಾಕಿ ಇರುವ ಎಲ್ಲಾ ಕೃಷಿ ಜಮೀನಿನ ಭೂಮಾಲಕರ ಪಹಣಿಯನ್ನು ಆಧಾರ್ ಲಿಂಕ್ (Aadhar link) ಮಾಡುವ ಬಗ್ಗೆ ಸರ್ಕಾರದಿಂದ (state government) ನಿರ್ದೇಶನವಿದೆ. ಪ್ರಸ್ತುತ ಕೃಷಿ ಜಮೀನಿನ ಪಹಣಿಯನ್ನು ಆಧಾರಗೆ ಲಿಂಕ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ತಾಲೂಕಿನ ರೈತರು ತಮ್ಮ ಪಹಣಿ, ಆಧಾರ ದಾಖಲಾತಿ ಹಾಗೂ ಆಧಾರ್ ಲಿಂಕ್ ಆಗಿರುವ ಮೊಬೈಲ್‌ನೊಂದಿಗೆ ಆಯಾ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ, ಪಹಣಿಗೆ ಆಧಾರ ಲಿಂಕ್ ಮಾಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.
ಇದನ್ನೂ ಓದಿ : ಮುರುಡೇಶ್ವರದಲ್ಲಿ ಅಂತಾರಾಷ್ಟ್ರೀಯ ಬಂದರು ನಿರ್ಮಾಣ
ಆಧಾರ ಲಿಂಕ್ ಯಾಕೆ?: ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಹಾಗೂ ಅಕ್ರಮ ಖಾತಾ ಬದಲಾವಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧಾರ ಜೋಡಣೆ ಅತ್ಯವಶ್ಯಕ.
ಇದನ್ನೂ ಓದಿ : ಅನುದಾನ ಬಿಡುಗಡೆಯಾದರೂ ಕಾಮಗಾರಿ ಇಲ್ಲ
ಬೇರೆಡೆ ಇದ್ದವರು ಹೇಗೆ ಮಾಡುವುದು?: ತಾಲೂಕಿನಲ್ಲಿ ಜಮೀನು ಹೊಂದಿ ಬೇರೆ ರಾಜ್ಯ ಅಥವಾ ವಿದೇಶದಲ್ಲಿ ವಾಸವಿದ್ದ ಭೂಮಾಲೀಕರು, ಅವರ ಕುಟುಂಬಸ್ಥರು ಅಥವಾ ಸಂಬಂಧಿಕರು ತಾಲೂಕಿನಲ್ಲಿದ್ದಲ್ಲಿ ಅವರ ಮೂಲಕ ಆಯಾ ಗ್ರಾಮ ಆಡಳಿತ ಅಧಿಕಾರಿಯನ್ನು ಸಂಪರ್ಕಿಸಿ ಪಹಣಿಗೆ ಆಧಾರ ಜೋಡಣೆ ಮಾಡಿಸಿಕೊಳ್ಳಲು ವಿನಂತಿಸಲಾಗಿದೆ.