ಭಟ್ಕಳ (Bhatkal) : ಹೆದ್ದಾರಿ ಪಕ್ಕ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ (bike hit) ಗಂಭೀರ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಾಲಿ ಗುಡಿಹಿತ್ಲು ನಿವಾಸಿ ಅಬ್ದುಲ್ ಹಮೀದ್ ಸೈಯದ್ ಮೆಹಮೂದ್ (೫೧) ಗಂಭೀರವಾಗಿ ಗಾಯಗೊಂಡವರು. ಇವರು ಶಿರಾಲಿ ಹಾದಿ ಮಾಸ್ತಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ (National Highway) ಪಕ್ಕದಲ್ಲಿ ನಿಂತಿದ್ದಾಗ ಅಪಘಾತ ಸಂಭವಿಸಿದೆ. ಮುರ್ಡೇಶ್ವರ (Murdeshwar) ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ (bike hit). ಅಬ್ದುಲ್ ಹಮೀದ್ ಅವರ ತಲೆ ಮತ್ತು ಕೈ-ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಇದನ್ನೂ ಓದಿ : ಜಿಎಸ್‌ಬಿ ಮುಖಂಡ ಸುಬ್ರಾಯ ಕಾಮತ ನಿಧನ
ಬೈಕ್ ಸವಾರ ಹಾಡುವಳ್ಳಿಯ ಹಸ್ರೊಳ್ಳಿಯ ಯೋಗರಾಜ ಸೋಮಯ್ಯ ನಾಯ್ಕ (೨೩) ವಿರುದ್ಧ ದೂರು ದಾಖಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಟ್ಕಳ ನಗರದ ಮಕ್ದೂಮ್ ಕಾಲೋನಿಯ ಶಬ್ನಮ್ ಸ್ಟ್ರೀಟ್ ನಿವಾಸಿ ಮಹ್ಮದ್ ಗೌಸ್ ಮಕ್ದೂಮ್ ಹುಸೇನ್ ದೂರು ದಾಖಲಿಸಿದ್ದಾರೆ (Case Reegistered). ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಅಡಿಕೆ ಕದ್ದ ಕಳ್ಳರ ಬಂಧನ; ಕಾರು, ಬೈಕ್ ವಶಕ್ಕೆ