ಭಟ್ಕಳ (Bhatkal) : ರಸ್ತೆ ದಾಟಲು ನಿಂತಿದ್ದ ವೃದ್ದನೋರ್ವನಿಗೆ ಅಶೋಕ ಲೇಲ್ಯಾಂಡ್ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗಂಭೀರವಾಗಿ ಗಾಯಗೊಂಡಿರುವ ವೃದ್ಧನನ್ನು ಶಿರಾಲಿ ಜಾಯಿಕಾಹಿತ್ಲು ನಿವಾಸಿ ಸೋಮಯ್ಯಾ ಅಪ್ಪು ನಾಯ್ಕ (೮೫) ಎಂದು ಗುರುತಿಸಲಾಗಿದೆ. ಅಶೋಕ ಲೇಲ್ಯಾಂಡ್ ಕಂಟೇನರ್ ಲಾರಿಯ ಚಾಲಕ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಲಾರಿ ಚಲಾಯಿಸಿಕೊಂಡು ಬಂದು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಇದನ್ನೂ ಓದಿ : ಅಮ್ಮ, ಮಡದಿಯನ್ನು ನೆನೆದು ಭಾವುಕರಾದರು
ಭಟ್ಕಳ (Bhatkal) ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ಸೋಮಯ್ಯಾ ಅಪ್ಪು ನಾಯ್ಕ ಇವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅವರ ಬಲಕೈಗೆ ಮತ್ತು ಬುಜಕ್ಕೆ ಗಂಭೀರ ಗಾಯವಾಗಿದ್ದು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ (Mangaluru) ವೆನ್ಲಾಕ್ ಆಸ್ಪತ್ರೆಗೆ (Wenlock) ಸಾಗಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ನಾ ಡಿಸೋಜರಿಗೆ ತವರಿನ ಶ್ರದ್ಧಾಂಜಲಿ
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಗಾಯಾಳುವಿನ ಮಗ ಜಯಂತ ಸೋಮಯ್ಯ ನಾಯ್ಕ ದೂರು (complaint) ನೀಡಿದ್ದಾರೆ.
ಭಟ್ಕಳದ ಶಿಕ್ಷಕಿಯರಿಂದ ಕಲಾ ಪ್ರದರ್ಶನ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ವೀಕ್ಷಿಸಬಹುದು.