ಭಟ್ಕಳ(Bhatkal): ಇತ್ತೀಚಿಗೆ ಉಡುಪಿ(Udupi)ಯಲ್ಲಿ ನಡೆದ ಎರಡನೇ ರಾಷ್ಟ್ರೀಯ (National) ಮಟ್ಟದ ಕರಾಟೆ (Karate) ಟೂರ್ನಾಮೆಂಟ್ ನಲ್ಲಿ ತಾಲೂಕಿನ ಬೆಳ್ನಿಯ ಬುಡೊಕಾನ್ ಇನ್ಸ್ಟಿಟ್ಯೂಟ್ ಆಪ್ ಮಾರ್ಷಲ್ ಆರ್ಟ್ಸ್ ಎಂಡ್ ಡಿಫೆನ್ಸ್ ಕ್ಲಬ್ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ (achievement). ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ದ್ವಿತೀಯ ಸ್ಥಾನದಲ್ಲಿ ಟ್ರೋಫಿ ಗೆದ್ದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆರಾಧ್ಯ ಆನಂದ ನಾಯ್ಕ ಕುಮಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಸಮರ್ಥ ನಾರಾಯಣ ನಾಯ್ಕ ಕಟಾ ವಿಭಾಗದಲ್ಲಿ ಪ್ರಥಮ, ಕುಮಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪ್ರೀತಮ ರಾಮ ಮೊಗೇರ ಮತ್ತು ಶಶಾಂಕ ವಿಠ್ಠಲ ನಾಯ್ಕ  ಇಬ್ಬರೂ ಕಟಾ ಹಾಗೂ ಕುಮಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ (Achievement).

ಇದನ್ನೂ ಓದಿ : ಸಂಭ್ರಮದ ನೂಲು ಹುಣ್ಣಿಮೆ ಆಚರಣೆ