ಭಟ್ಕಳ (Bhatkal): ಮುರುಡೇಶ್ವರದಲ್ಲಿ (Murudeshwar) ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ (Fisheries day) ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ್ದ ಡಾಲಿ ಧನಂಜಯ (Dolly Dhananjay) ನೇತ್ರಾಣಿ ದ್ವೀಪದಲ್ಲಿ (Netrani island) ಸ್ಕೂಬ್ ಡೈವಿಂಗ್ (scuba diving) ಮಾಡುವ ಮೂಲಕ ಸಮುದ್ರದಾಳದ ಸೌಂದರ್ಯವನ್ನು ಸವಿದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶನಿವಾರ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಪೂರ್ವದಲ್ಲಿ ಬೋಟ್‌ನಲ್ಲಿ ನೇತ್ರಾಣಿ ದ್ವೀಪಕ್ಕೆ ತೆರಳಿದ ನಟ ಡಾಲಿ ಧನ ಧನಂಜಯ (Dolly Dhananjay) ಸುಮಾರು ಒಂದು ಗಂಟೆಗಳ ಕಾಲ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದ ಸೌಂದರ್ಯವನ್ನು ಸವಿದಿದ್ದಾರೆ. ಸ್ಕೂಬ್ ಡೈವಿಂಗ್ ಮಾಡಿದ ಬಳಿಕ ತಮ್ಮ ಅನುಭವ ಹಂಚಿಕೊಂಡ ಡಾಲಿ, ಈ ಅನುಭವ ಸುಂದರವಾಗಿತ್ತು. ಸೂಪರ್ ಆಗಿದೆ. ಮತ್ತೆ ಬರುತ್ತೇನೆ. ತುಂಬಾ ಆಳಕ್ಕೆ ಹೋಗಿದ್ದೇವೆ. ಒಂದು ಗಂಟೆಗಳ ಕಾಲ ಸ್ಕೂಬಾ ಡೈವಿಂಗ್ ಮಾಡಬಹುದೆಂದು ಹೇಳಿಕೊಂಡಿದ್ದಾರೆ.
ನಟ ಡಾಲಿ ಧನಂಜಯ ಅವರ ಸ್ಕೂಬಾ ಡೈವಿಂಗ್ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಸುಬ್ರಹ್ಮಣ್ಯದಿಂದ ರೈಲಿನಲ್ಲಿ ಬಂದಿದ್ದ ನಕ್ಸಲ್ ತಂಡ