ಕುಮಟಾ (Kumta): ಮದ್ಯದ ಅಮಲಿನಲ್ಲಿ ಬಾವಿಗೆ ಕಾಲು ಜಾರಿ ಬಿದ್ದು ಯುವಕ ಮೃತಪಟ್ಟ ಘಟನೆ (Alcoholic death) ಕುಮಟಾ ತಾಲೂಕಿನ ಮೂರೂರು ಗ್ರಾಮದಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೂರೂರಿನ ಬೋಳೆಗುಡ್ಡಿ ನಿವಾಸಿ ಗೌರೀಶ ಮಂಜುನಾಥ ಹೆಗಡೆ (೩೫) ಮೃತ ದುರ್ದೈವಿ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ವಿಪರೀತ ಸಾರಾಯಿ ಕುಡಿಯುತ್ತಿದ್ದರು. ಮನೆಗೂ ಸರಿಯಾಗಿ ಬರದೆ, ಯಾವಾಗಲಾದರೂ ಬರುತ್ತಿದ್ದರು. ಸೆ. ೧೦ರಂದು ರಾತ್ರಿ ೮.೩೦ರಿಂದ ಇವರು ಯಾರಿಗೂ ಕಾಣಿಸಿಕೊಂಡಿರಲಿಲ್ಲ. ನಿನ್ನೆ ಸೆ.೧೨ರ ಮಧ್ಯಾಹ್ನ ೧೨.೩೦ರ ಸುಮಾರಿಗೆ ಪಕ್ಕದ ಮನೆಯ ಅಡಿಕೆ ತೋಟದ ತೆರೆದ ಬಾವಿಯಲ್ಲಿ ಇವರ ಶವ ಪತ್ತೆಯಾಗಿದೆ. ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ (Alcoholic death) ಎಂದು ಮೃತನ ಅಣ್ಣ ಗಣೇಶ ಹೆಗಡೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಕುಮಟಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮದ್ಯ ಸೇವನೆಗೆ ಅವಕಾಶ; ವ್ಯಾಪಾರಿ ವಿರುದ್ಧ ಪ್ರಕರಣ