ಭಟ್ಕಳ (Bhatkal) : ಇಲ್ಲಿನ ತಹಶೀಲ್ದಾ‌ರ ಮತ್ತು ಸಹಾಯಕ ಆಯುಕ್ತರ ಕಚೇರಿಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು (RTI) ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಉತ್ತರ ಕನ್ನಡ (Uttara kannada) ಹಾಗೂ ಭಟ್ಕಳ ಘಟಕ ವತಿಯಿಂದ ಹಳೇ ತಹಶೀಲ್ದಾರ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ (Satyagraha) ಶುಕ್ರವಾರದಂದು ಆರಂಭವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ಮತ್ತು ಸಹಾಯಕ ಆಯುಕ್ತ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ನಿಯಮಾವಳಿಗಳನ್ನು ಗಾಳಿಗೆ ತೂರಿ ಒಂದೇ ಕಚೇರಿಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ತಕ್ಷಣ ಇಂತಹ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ತಾಲೂಕಿಗೆ ಅಥವಾ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ ನಿಯಮಾವಳಿಗಳನ್ನು ಪಾಲಿಸಿ, ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಇಸ್ಪೀಟ್‌ ಜೂಜಾಡುತ್ತಿದ್ದ ೧೧ ಜನರ ವಿರುದ್ಧ ಪ್ರಕರಣ

ಇಂತಹ ಸಿಬ್ಬಂದಿ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದರಿಂದ ಇಲಾಖೆಯ ಘನತೆ, ಗೌರವ ಹಾಳಾಗುತ್ತಿದೆ. ಮತ್ತು ಇಂತಹ ಸಿಬ್ಬಂದಿಗಳಿಂದ ಸಾರ್ವಜನಿಕರ ಕೆಲಸವೂ ಆಗುವುದಿಲ್ಲ. ಇಲ್ಲಿರುವ ಸಿಬ್ಬಂದಿ, ಸಾರ್ವಜನಿಕರ ಕೆಲಸ ಮಾಡುವುದಕ್ಕಿಂತ ದಲ್ಲಾಳಿಗಳ ಕೆಲಸಕ್ಕೆ ಸೀಮಿತವಾದಂತಿದೆ. ಇಲ್ಲಿರುವ ಸಿಬ್ಬಂದಿಗಳ ವರ್ಗಾವಣೆಯು ಸಹಾಯಕ ಆಯುಕ್ತರ ಕಚೇರಿಯಿಂದ ತಹಶೀಲ್ದಾರ ಕಚೇರಿಗೆ, ತಹಶೀಲ್ದಾರ ಕಚೇರಿಯಿಂದ ಸಹಾಯಕ ಆಯುಕ್ತರ ಕಚೇರಿಗೆ ಮಾತ್ರ ಸೀಮಿತವಾಗಿದೆ. ಇವರ ನೌಕರಿಯು ಕೇವಲ ಭಟ್ಕಳ ತಾಲೂಕಿಗೆ ಮಾತ್ರ ಸೀಮಿತವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ ಬಿದ್ದು ಕಾಣೆಯಾದ ವಿದೇಶಿ ಮೀನುಗಾರ

ಕೇವಲ ಆಡಳಿತದಲ್ಲಿ ಪಾರದರ್ಶಕ ತರಲು ತಹಶೀಲ್ದಾರರನ್ನು ಮಾತ್ರ ವರ್ಗಾವಣೆ ಮಾಡಿದರೆ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತಂದು ಕೊಳ್ಳುವುದು ಕಷ್ಟದ ಸಂಗತಿ. ಈ ಹಿಂದೆ ಸಹಾಯಕ ಆಯುಕ್ತ ಕಚೇರಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಲೆಕ್ಕಿಸದೇ ಸಾರ್ವಜನಿಕರ ಪರವಾಗಿ ಕ್ರಮ ಕೈಗೊಳ್ಳದೇ ಇಲಾಖೆಯ ಅಧಿಕಾರಿಗಳ ಪರವಾಗಿಯೇ ವರ್ತಿಸುತ್ತಿರುವ ಜಿಲ್ಲಾಡಳಿತದ ಧೋರಣೆಯನ್ನು ವಿರೋಧಿಸಿ ಇಂದು ನಾವು ಈ ಧರಣಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : Brain surgery/ ರೋಗಿ ಕೊಳಲು ಊದುತ್ತಿರುವಾಗಲೇ ಶಸ್ತ್ರಚಿಕಿತ್ಸೆ !

ಸಂಘದ ಜಿಲ್ಲಾಧ್ಯಕ್ಷ ಶಂಕರ ನಾಯ್ಕ ಮಾತನಾಡಿ, ಕಳೆದ ೧೦ ವರ್ಷಗಳಿಂದ ಮೇಲ್ಪಟ್ಟ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವಂತೆ ಈಗಾಗಲೇ ಮನವಿಯನ್ನು ನೀಡಿದ್ದೇವೆ. ಆದರೆ ನಮ್ಮ ನಮ್ಮ ಮಮವಿಯನ್ನು ಪುರಸ್ಕರಿಸದೆ, ವರ್ಗಾವಣೆ ನಿಯಮಾವಳಿಯನ್ನು ಪಾಲನೆ ಮಾಡದೆ. ಅಧಿಕಾರಿಗಳೇ ನಮ್ಮನ್ನು ಈ ಹೋರಾಟಕ್ಕೆ ಇಳಿಯುವಂತೆ ಮಾಡಿದ್ದಾರೆ. ಕಾರಣ ಅವರ ಬೇಜವಾಬ್ದಾರಿ ತನ ಹಾಗೂ ಅವರ ಆಡಳಿತ ನಿರ್ಲಕ್ಷ್ಯ ಎಂದು ಹೇಳಬಹುದು. ಗಾಂಧಿ ಮಾರ್ಗ ಹಾಗೂ ಅಂಬೇಡ್ಕರ್ ಅವರ ನೀತಿ ಪಾಠದ ಅಡಿಯಲ್ಲಿ ಇಂದಿನ ಈ ಸತ್ಯಾಗ್ರಹ (Satyagraha) ಹೋರಾಟ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ :  ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಹೋರಾಟದಲ್ಲಿ ಪಾಲ್ಗೊಂಡಿದ್ದ ರಾಜ್ಯ ಅಧ್ಯಕ್ಷ ಚೆನ್ನಯ್ಯ ವಸ್ತ್ರದ್ ಮಾತನಾಡಿ, ಪ್ರತಿಭಟನೆ ಮಾಡಲು ಅಧಿಕಾರಿಗಳೇ ನಮಗೆ ಅವಕಾಶ ಮಾಡಿಕೊಟ್ಟಿದ್ದೀರಾ. ಮಾಡುವ ಕೆಲಸವನ್ನು ನೀವು ಸರಿಯಾಗಿ ಮಾಡಿದ್ದರೆ ನಾವು ಇಲ್ಲಿ ಬಂದು ಕುಳಿತುಕೊಳ್ಳುವ ಅವಶ್ಯಕತೆ ಬರುತ್ತಿರಲಿಲ್ಲ. ನಾವು ಸಂವಿಧಾನದ ಪರವಾಗಿ ಕೆಲಸ ಮಾಡುತ್ತಿದ್ದೇವೆ. ೧೦ ವರ್ಷಗಳಿಂದ ಮೇಲ್ಪಟ್ಟ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ತನಕ ಈ ಹೋರಾಟವನ್ನು ನಾವು ನಿಲ್ಲಿಸುವುದಿಲ್ಲ. ನಾವು ಯಾರೂ ಇಲ್ಲಿ ಹಣಕ್ಕೆ ಬಂದು ಪ್ರತಿಭಟನೆಯಾಗಲಿ ಹೋರಾಟವಾಗಲಿ ಮಾಡುತ್ತಿಲ್ಲ. ಅಧಿಕಾರಿಗಳು ವರ್ಗಾವಣೆ ಮಾಡಿಸಿದರೆ ನಮಗೆ ಯಾರು ಹಣ ನೀಡುವುದಿಲ್ಲ. ಸ್ವಇಚ್ಛೆಯಿಂದ ಸಂವಿಧಾನವನ್ನು ಕಾಪಾಡಬೇಕು, ಕಾನೂನು ಪಾಲನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯುತ್ತಿದೆ. ಇಂದು ನಮ್ಮ ಹೋರಾಟ ಪ್ರಾರಂಭವಾಗಿದೆ.  ನೀವು ಸೂಕ್ತ ಕ್ರಮ ಕೈಗೊಳ್ಳುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಉದ್ಯೋಗ ಮೇಳದಲ್ಲಿ ಬರಲಿವೆ ಪ್ರತಿಷ್ಠಿತ ಕಂಪನಿಗಳು

ಈ ಸಂದರ್ಭದಲ್ಲಿ ಬೆಳಗಾವಿ (Belagavi) ವಿಭಾಗದ ಸಂಘಟನಾ ಕಾರ್ಯದರ್ಶಿ ರಾಜು ನಾಯ್ಕ, ಭಟ್ಕಳ ತಾಲೂಕು ಅಧ್ಯಕ್ಷ
ನಾಗೇಂದ್ರ ನಾಯ್ಕ , ಉಪಾಧ್ಯಕ್ಷ ವಸಂತ ದೇವಾಡಿಗ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ, ಜೇವರ್ಗಿ ತಾಲೂಕು ಅಧ್ಯಕ್ಷ ವೀರೇಶ ಮಠ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಪಾಟೀಲ, ಕಲಬುರ್ಗಿ (Kalburgi) ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲ ಬಿಲ್ಲಾಳ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.