ಭಟ್ಕಳ: ವಧೆ ಮಾಡುವ ಉದ್ದೇಶದಿಂದ ಎತ್ತುಗಳನ್ನು ಕಳ್ಳತನ ಮಾಡಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮುರ್ಡೇಶ್ವರ (Murdeshwar) ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ (arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತನನ್ನು ನ್ಯಾಶನಲ್ ಕಾಲೋನಿ, ಆಯಿಶಾ ಶಾದಿ ಹಾಲ್ ಸಮೀಪದ ನಿವಾಸಿ ಮೊಹಮ್ಮದ್ ಸದಾನ್ (32) ತಂದೆ ಮೂಹಮ್ಮದ್ ಮುಬೀನ್ ಖಾನ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಆರೋಪಿ ಸಮೀರ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Khelo India/ ಖೇಲೋ ಇಂಡಿಯಾ ಅಸ್ಮಿತಾ ದಕ್ಷಿಣ ವಲಯ ಕಿಕ್ ಬಾಕ್ಸಿಂಗ್ ಲೀಗ್ ನಲ್ಲಿ ಭಟ್ಕಳದ ಮಹಿಳಾ ಪಟುಗಳ ಸಾಧನೆ

ಆರೋಪಿಗಳು ಸೇರಿ ಎಲ್ಲಿಂದಲೋ ಸುಮಾರು ₹೧.೧೦ ಲಕ್ಷ ಮೌಲ್ಯದ ನಾಲ್ಕು ಎತ್ತುಗಳನ್ನು ಕಳ್ಳತನ ಮಾಡಿಕೊಂಡು ಅಕ್ರಮವಾಗಿ ಸಾಗಾಟ ಮಾಡಿದ್ದು, ಮುರ್ಡೇಶ್ವರದ ನ್ಯಾಶನಲ್ ಕಾಲೋನಿಯ ಆಯಿಶಾ ಶಾದಿ ಹಾಲ್ ಸಮೀಪದ ಖಾಲಿ ಜಾಗದಲ್ಲಿ ಮೇವು–ನೀರು ನೀಡದೇ ಹಿಂಸಾತ್ಮಕವಾಗಿ ಕಟ್ಟಿ ಇಟ್ಟಿದ್ದರು ಎನ್ನಲಾಗಿದೆ.

Guruvandane/ ಗುರು-ಶಿಷ್ಯರ ಪುನರ್ಮಿಲನ: ಭಾವಪೂರ್ಣ ಗುರುವಂದನೆ

ಪೊಲೀಸರು ದಾಳಿ ನಡೆಸಿದ ವೇಳೆ ಮೊಹಮ್ಮದ್ ಸದಾನ್ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದು (arrested), ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

CA exam/ ಸಿಎ ಪರೀಕ್ಷೆಯಲ್ಲಿ ಸೋಡಿಗದ್ದೆ ಯುವತಿ ಉತ್ತೀರ್ಣ