ಬೆಂಗಳೂರು (Bengaluru) :  ಕರ್ನಾಟಕ ಲೋಕಾಯುಕ್ತದ (Karnataka Lokayutka) ವಿಶೇಷ ತನಿಖಾ ತಂಡ (SIT) “ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ವಿಶೇಷ ನ್ಯಾಯಾಲಯವು (Special Court) ಮಾಜಿ ಸಚಿವ ಆನಂದ್ ಸಿಂಗ್ (Anand Singh) ಮತ್ತು ಗೋವಾ (Goa) ಪ್ರವಾಸೋದ್ಯಮ ಸಚಿವ (Tourism Minister) ರೋಹನ್ ಎಸ್. ಖೌಂಟೆ ಸೇರಿದಂತೆ ೧೨ ಆರೋಪಿಗಳು ಮತ್ತು ಮೂರು ಸಂಸ್ಥೆಗಳನ್ನು ಬೇಲೇಕೇರಿ (Belekeri) ಅದಿರು ಪ್ರಕರಣದಲ್ಲಿ (ore case) ಖುಲಾಸೆಗೊಳಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಿ.ಪಿ. ಆನಂದ ಕುಮಾರ ಅಲಿಯಾಸ್‌  ಆನಂದ ಸಿಂಗ್, ಬಿ.ಎಸ್. ಗೋಪಾಲ್ ಸಿಂಗ್, ಬಿ.ಎಸ್. ಪಾಂಡುರಂಗ್ ಸಿಂಗ್, ನೈವೇದ್ಯ ಲಾಜಿಸ್ಟಿಕ್ಸ್, ಅದರ ನಿರ್ದೇಶಕರಾದ ರಾಜೇಶ ಅಶೋಕ ಕೌಂಟೆ, ರೋಹನ್ ಎಸ್. ಕೌಂಟೆ ಮತ್ತು ವಿಜಯ್, ಕ್ಲಾರಿಯಾ ಮಾರ್ಕೆಟಿಂಗ್ ಸರ್ವೀಸಸ್, ಶಾಜು ಕೆ. ನಾಯರ್, ರಿಯಾ ನಾಯರ್, ಎಸ್. ಮೊಹಮ್ಮದ್ ಮುನೀರ್ ಮತ್ತು ಎಸ್.ಬಿ. ಮಿನರಲ್ಸ್ ಖುಲಾಸೆಗೊಂಡವರು. ಇವರ ವಿರುದ್ಧ ಐಪಿಸಿ, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, ೧೯೫೭ರ ವಿವಿಧ ವಿಭಾಗಗಳ ಅಡಿಯಲ್ಲಿ ಮತ್ತು ಕರ್ನಾಟಕ ಅರಣ್ಯ ನಿಯಮಗಳು, ೧೯೬೯ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಪ್ರಕರಣ (ore case) ದಾಖಲಿಸಲಾಗಿತ್ತು.

ಇದನ್ನೂ ಓದಿ : FIR/ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ಎಫ್ಐಆರ್ 

ಹಾಲಿ ಮತ್ತು ಮಾಜಿ ಸಂಸದರು/ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್, ಪ್ರಾಸಿಕ್ಯೂಷನ್ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದ್ದಾರೆ. ೨೦೦೯ ಮತ್ತು ೨೦೧೦ರ ನಡುವೆ ನಡೆದ ಅಪರಾಧಗಳಿಗಾಗಿ ೨೦೧೫ರಲ್ಲಿ ಎಸ್‌ಐಟಿ ದಾಖಲಿಸಿದ ಪ್ರಕರಣದ ಪ್ರಕಾರ, ಕಾರವಾರ ಬಂದರಿನಿಂದ (Karwar Port) ೧೪೦೦೦ ಮೆಟ್ರಿಕ್ ಟನ್ ಕಬ್ಬಿಣ ಮತ್ತು ಬೇಲೆಕೇರಿ ಬಂದರಿನಿಂದ (Belekeri Port) ಸುಮಾರು ೬೦೦೦ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ರಫ್ತು ಮಾಡಲು ಪಿಸೆಸ್ ಎಕ್ಸಿಮ್ ಮುಂಬೈ ಕಂಪನಿಯು ಪಿಇಸಿ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅಗತ್ಯ ಪರವಾನಗಿಗಳನ್ನು ಪಡೆಯದೆ ಅಥವಾ ಸರ್ಕಾರಕ್ಕೆ ಅಗತ್ಯವಾದ ರಾಯಧನ ಮತ್ತು ತೆರಿಗೆಗಳನ್ನು ಪಾವತಿಸದೆ ಪಿಸೆಸ್ ಎಕ್ಸಿಮ್ ಮುಂಬೈ ವಿವಿಧ ಡೀಲರ್‌ಗಳಿಂದ ೧೧,೩೯೭.೪೪  ಮೆಟ್ರಿಕ್ ಟನ್ ಪಡೆದುಕೊಂಡಿದೆ ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ : Intense sun/ ಕರಾವಳಿಯಲ್ಲಿ ತೀವ್ರ ಬಿಸಿಲು; ಎಲ್ಲೆಲ್ಲಿ ಎಷ್ಟು ಗೊತ್ತಾ?