ಭಟ್ಕಳ (Bhatkal): ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯಲ್ಲಿರುವ ಕರಿಕಲ್ ಧ್ಯಾನ ಮಂದಿರದಲ್ಲಿ 38ನೇ ದಿನದ ಚಾತುರ್ಮಾಸ್ಯ (Chathurmasya) ವ್ರತದಲ್ಲಿರುವ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahman and Saraswathi Swamiji) ಅವರನ್ನು ಅಂಕೋಲಾ ತಾಲೂಕಾ ನಾಮಧಾರಿ ಒಕ್ಕೂಟದ ಸದಸ್ಯರು (Ankola Namadhari) ಅಧ್ಯಕ್ಷ ನಾಗೇಶ ವೆಂಕಪ್ಪ ನಾಯ್ಕ ನೇತೃತ್ವದಲ್ಲಿ ಭೇಟಿಯಾದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗುರುಗಳಿಗೆ ಫಲಪುಷ್ಪ ಸಮರ್ಪಿಸಿದ ನಾಗೇಶ ನಾಯ್ಕ, ಶ್ರೀಗಳಿಂದ ಆಶೀರ್ವಾದ ಪಡೆದು ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣಪತಿ ನಾಯ್ಕ ಹನುಮಟ್ಟ, ಬಾಲಕೃಷ್ಣ ನಾಯ್ಕ ಬೊಬ್ರುವಾಡ, ಉದಯ ನಾಯ್ಕ ಹೊಸಗದ್ದೆ, ಶ್ರೀಧರ ನಾಯ್ಕ ಬೆಳಂಬಾರ, ವಿಜಯ, ನಿತೀನ ಜಿ. (Ankola Namadhari) ಉಪಸ್ಥಿತರಿದ್ದರು.
ಇದನ್ನೂ ಓದಿ : ಶಿಕ್ಷಕರ ದಿನಾಚರಣೆಯ ಅಂಗವಾಗಿ ಕವನ ರಚನಾ ಸ್ಪರ್ಧೆ