ಭಟ್ಕಳ(Bhatkal): ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನ (Yakshagana) ಕಲೆಯ ಪಾತ್ರ ಮಹತ್ತರವಾದದ್ದು. ಕಲೆಯಿಂದಾಗಿ ವ್ಯಕ್ತಿತ್ವ ವಿಕಸನವಾಗಿ, ವ್ಯಕ್ತಿಯನ್ನು ಜನಪ್ರಿಯಗೊಳಿಸುತ್ತದೆ. ಯಕ್ಷಕಲೆಯನ್ನು ತಲೆಮಾರು ದಾಟಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಪ್ರಾರ್ಥನ ಪತ್ರಿಕೆಯ ಸಂಪಾದಕ, ಯಕ್ಷಗಾನ ಕಲಾವಿದ ಭಾಸ್ಕರ ಶೆಟ್ಟಿ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಪಟ್ಟಣದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಯಕ್ಷಗಾನ (Yakshagana) ಅಕಾಡೆಮಿ ಸಹಯೋಗದಲ್ಲಿ ನಡೆದ ಶ್ರೀ ದುರ್ಗಪ್ಪ ಗುಡಿಗಾರ (Durgappa Gudigar) ಯಕ್ಷಗಾನ ಟ್ರಸ್ಟಿನ ವಾರ್ಷಿಕೋತ್ಸವ (Anniversary), ಯಕ್ಷಗಾನ ತರಬೇತಿ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶಿಕ್ಷಕ ಶ್ರೀಧರ ಶೇಟ, ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಕಾರ್ಯದರ್ಶಿ ಶಿವರಾಮ ನಾಯ್ಕ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದುರ್ಗಪ್ಪ ಗುಡಿಗಾರ ಅವರ ಪತ್ನಿ ಶಾರದಾ ದುರ್ಗಪ್ಪ ಗುಡಿಗಾರ ಮಾತನಾಡಿದರು.
ಇದನ್ನೂ ಓದಿ : ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆಯ ರಂಪಾಟ
ಶ್ರೀ ಮುರ್ಡೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರೊ. ಗಣಪತಿ ಕಾಯ್ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖ್ಯಾತ ಮದ್ದಳೆಗಾರ ಮಂಜುನಾಥ ಭಂಡಾರಿ ಕಡತೋಕರಿಗೆ ದುರ್ಗಪ್ಪ ಗುಡಿಗಾರ ನೆನಪಿನ ಪ್ರಶಸ್ತಿ ನೀಡಲಾಯಿತು. ದಿ. ಶ್ರೀ ದುರ್ಗಪ್ಪ ಗುಡಿಗಾರ ಮೆಮೋರಿಯಲ್ ಯಕ್ಷಗಾನ ಆರ್ಟ್ಸ್ ಅಕಾಡೆಮಿ ಚಾರಿಟೆಬಲ್ ಟ್ರಸ್ಟಿನ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಕಂಸವಧೆ ಯಕ್ಷಗಾನ ಪ್ರಸಂಗ ಪ್ರೇಕ್ಷಕರ ಮನಸೂರೆಗೊಂಡಿತು. ಶಿರಾಲಿಯ ಶ್ರೀವಲಿ ಪ್ರೌಢಶಾಲೆ ಶಿಕ್ಷಕ ಸಂಜಯ ಗುಡಿಗಾರ ಕಾರ್ಯಕ್ರಮ ನಿರೂಪಿಸಿದರು. ಸಂಘಟಕಿ ಉಮಾ ಗುಡಿಗಾರ ಸ್ವಾಗತಿಸಿ, ವಂದಿಸಿದರು.
ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸೀಮೋಲ್ಲಂಘನ ಇಂದು