ಭಟ್ಕಳ (Bhatkal): ಅರಣ್ಯವಾಸಿಗಳ (forest dwellers) ಅರಣ್ಯಭೂಮಿ (Forest land) ಹಕ್ಕಿಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟನಲ್ಲಿ (Supreme Court) ನಿಲುವು ಪ್ರಕಟಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಂದು ಅ.೨೧ರಂದು ಭಟ್ಕಳ ತಾಲೂಕಿನ ಸಿಟಿ ಹಾಲ್ ಸಂಭಾಗಣದಲ್ಲಿ ಭಟ್ಕಳ ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ತಿರಸ್ಕಾರವಾಗಿರುವ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಮತ್ತು ಒತ್ತುವರಿ ಪ್ರದೇಶದಲ್ಲಿ (enchroachment) ಅರಣ್ಯೀಕರಣ (Afforestation) ಮಾಡಬೇಕೆಂಬ ಪರಿಸರವಾದಿ ಸಂಘಟನೆಗಳ ವಿಚಾರಣೆಯಲ್ಲಿ ಸರ್ಕಾರಗಳು ಅರಣ್ಯವಾಸಿಗಳ (forest dwellers) ಪರ ನಿಲುವು ಪ್ರಕಟಿಸುವದು ಮಹತ್ವದ್ದಾಗಿದೆ. ಇಲ್ಲದಿದ್ದಲ್ಲಿ ಅರಣ್ಯವಾಸಿಗಳು ಅತಂತ್ರವಾಗುವರು ಎಂದು ಅವರು ಹೇಳಿದರು.
ಇದನ್ನೂ ಓದಿ : ಅರಣ್ಯ ಜಾಗ ಅತಿಕ್ರಮಣಕ್ಕೆ ಗ್ರಾಮಸ್ಥರ ವಿರೋಧ
ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ಪರವಾಗಿ ವಾದ ಮಂಡಿಸುತ್ತಿದೆ. ಅರಣ್ಯವಾಸಿಗಳ ಪರ ಸ್ಪಷ್ಟ ಆದೇಶ ಬರಬಹುದೆಂಬ ನಿರೀಕ್ಷೆಯಲ್ಲಿ ಹೋರಾಟಗಾರರ ವೇದಿಕೆ ಇದೆ ಎಂಬ ಆಶಯವನ್ನು ಅಧ್ಯಕ್ಷ ರವೀಂದ್ರ ನಾಯ್ಕ ವ್ಯಕ್ತಪಡಿಸಿದ್ದರು. ಜಿಪಿಎಸ್ ಪುನರ್ ಪರಿಶಿಲನಾ ಮೇಲ್ಮನವಿ ಸ್ವೀಕೃತಿ ಪತ್ರಿಯನ್ನು ಅರಣ್ಯವಾಸಿಗಳಿಗೆ ಹಿರಿಯರಾದ ಕಜಿಂ ಇನಾಯುತ್ ಶಾಬಂದ್ರಿ ವಿತರಿಸಿದರು. ಸಭೆಯಲ್ಲಿ ಪ್ರಮುಖರಾದ ದೇವರಾಜ ಗೊಂಡ, ಚಂದ್ರು ನಾಯ್ಕ, ಪಾಂಡುರಂಗ ನಾಯ್ಕ, ರತ್ನ ಬೆಳಕೆ, ಶ್ರೀಧರ ನಾಯ್ಕ ಹಾಡುವಳ್ಳಿ, ಖುಯುಮ ಸಾಬ್ ಮುಂತಾದವರು ಉಪಸ್ಥಿತರಿದ್ದರು.