ಭಟ್ಕಳ: ನಗರದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟವನ್ನು (Annual sports meet) ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ ಉದ್ಘಾಟಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಂತರ ಮಾತನಾಡಿ, “ಕ್ರೀಡೆ ವಿದ್ಯಾರ್ಥಿಗಳಿಗೆ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿ ನೀಡುತ್ತದೆ. ಸೋಲುವ ಭಯವು ಒತ್ತಡ ಮತ್ತು ಗಂಭೀರ ನಿರ್ಧಾರಗಳಿಗೆ ಕಾರಣವಾಗಬಲ್ಲದು. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆತ್ಮನಿಯಂತ್ರಣ ಮತ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಜ್ಞಾನ ಸಿಗುತ್ತದೆ” ಎಂದು ತಿಳಿಸಿದರು.
ನಿನಾದ ಯುಗಾದಿ ಸಾಹಿತ್ಯ ಸಂಭ್ರಮ-೨೦೨೬: ಕವಿಗಳಿಗೆ ಆಹ್ವಾನ
ತಾಲೂಕು ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿ, “ಕ್ರೀಡೆ ದೈಹಿಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಏಕಾಗ್ರತೆ, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ” ಎಂದು ಹೇಳಿದರು. ಟ್ರಸ್ಟಿನ ಅಧ್ಯಕ್ಷ ಸುರೇಶ ನಾಯಕ, ಪ್ರಾಂಶುಪಾಲ ವೀರೇಂದ್ರ ವಿ ಶಾನಭಾಗ ಉಪಸ್ಥಿತರಿದ್ದರು.
Women’s Day / ಭಟ್ಕಳ ಬಿಜೆಪಿ ಕಚೇರಿಯಲ್ಲಿ ಮಹಿಳಾ ದಿನಾಚರಣೆ
ವಾರ್ಷಿಕ ಕ್ರೀಡಾಕೂಟ ನಿಮಿತ್ತ (Annual sports meet) ಸರ್ಕಾರಿ ಪ್ರೌಢ ಶಾಲೆ ಬೆಳ್ಕೆಯ ಮೂಲಭೂತ ಸೌಕರ್ಯ ಮತ್ತು ಮೈದಾನವನ್ನು ಉನ್ನತೀಕರಿಸಲು ಶ್ರಮಿಸುತ್ತಿರುವ ಪ್ರಕಾಶ ಶಿರಾಲಿಯನ್ನು ಸನ್ಮಾನಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ಸಹನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾವ್ಯಾ ಸ್ವಾಗತಿಸಿದರು. ಪ್ರೇಮಾಕ್ಷಿ ಪ್ರತಿಜ್ಞಾವಿಧಿ ಬೋಧಿಸಿದರು. ಲಿಡಿಯಾ ನಿರೂಪಿಸಿದರು ಮತ್ತು ಸಿಂಧು ವಂದಿಸಿದರು.
Bhatkal/ ಚಿತ್ರಾಪುರದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವೃದ್ಧ ಸಾವು



