ಭಟ್ಕಳ (Bhatkal): ದಿನದಿಂದ ದಿನಕ್ಕೆ ಭಟ್ಕಳ ತಾಲೂಕಿನಲ್ಲಿ ಪೊಲೀಸ್ ಇಲಾಖೆಯ ಯಾವುದೇ ಭಯವಿಲ್ಲದೆ ಗೋ ಸಾಗಾಟ (Cattle Trafficking) ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬುಧವಾರ ಸಂಜೆ ಅಷ್ಟೇ ಮುಠ್ಠಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ತಲಾಂದ ಗ್ರಾಮಕ್ಕೆ ತೆರಳುವ ರಸ್ತೆ ಸಮೀಪ ಮೇವು ತಿನ್ನಲು ಬಂದ ಗೋವೊಂದನ್ನು ದುಷ್ಕರ್ಮಿಗಳು ವಧೆ ಮಾಡಿ ರುಂಡ ಮತ್ತು ಅದರ ಅವಶೇಷಗಳನ್ನು ಅಲ್ಲೇ ಸಮೀಪವಿದ್ದ ಬಾವಿಯಲ್ಲಿ ಎಸೆದು ಪರಾರಿಯಾಗಿದ್ದರು. ಈ ವಿಷಯ ಎಲ್ಲೆಡೆ ಹಬ್ಬಿ ಬೆಳಗಾಗುವ ತನಕ ಮುಠ್ಠಳ್ಳಿ ಪಂಚಾಯತ ವ್ಯಾಪ್ತಿಯಲ್ಲಿಯೇ ಮತ್ತೆ ಗುರುವಾರ ಇನ್ನೊಂದು ಪ್ರಕರಣ ಪತ್ತೆಯಾಗಿದೆ.
ಇದನ್ನೂ ಓದಿ : ಭಟ್ಕಳ ವೃತ್ತದ ಬಳಿ ಟೂರಿಸ್ಟ್ ಕಾರು ನಿಲುಗಡೆಗೆ ವಿರೋಧ
ಈ ಭಾಗದಲ್ಲಿ ಗೋ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಸ್ಥಳೀಯರಿಗೆ ಸಿಕ್ಕ ಹಿನ್ನೆಲೆಯಲ್ಲಿ ಈ ಭಾಗದ ಯುವಕರು ಬುಧವಾರ ರಾತ್ರಿಯೇ ಮೂರ್ತಿ ರಸ್ತೆಗೆ ಅಡ್ಡಲಾಗಿ ಕಲ್ಲು ಕೂಡಿಟ್ಟು ಕಾವಲು ಕಾಯುತ್ತ ಕುಳಿತುಕೊಂಡಿದ್ದರು. ನಂತರ ಗುರುವಾರ ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಪಿಕ್ ಅಪ್ ವಾಹನದಲ್ಲಿ ಗೋವುಗಳನ್ನು ಸಾಗಾಟ (cattle trafficking) ಮಾಡಿದ್ದಾರೆ. ಆರೋಪಿಗಳು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಕಲ್ಲುಗಳ ಮೇಲೆ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಸುದ್ದಿ ತಿಳಿದು ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಆರೋಪಿಗಳು ಪರಾರಿಯಾಗಿದ್ದಾರೆ.
ವಿಡಿಯೋ ವರದಿ ಸಹಿತ ಇದನ್ನೂ ಓದಿ : ಮೇವಿಗಾಗಿ ಬಂದ ಗೋವಿನ ವಧೆ