ಭಟ್ಕಳ: ರಾಜ್ಯ ಸರ್ಕಾರವು (State government) ಮೇ ೨೨, ೨೦೨೬ರಂದು ಕಾರ್ಮಿಕ ಇಲಾಖೆಯ (labour department) ಮೂಲಕ ಪರಿಷ್ಕೃತ ಕನಿಷ್ಠ ವೇತನ (revised minimum wage) ಅಧಿಸೂಚನೆಯನ್ನು ಹೊರಡಿಸಿ, ಪರಿಷ್ಕೃತ ವೇತನ ದರಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ, ಭಟ್ಕಳ ನಗರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿಯ ಹೊರಗುತ್ತಿಗೆ ನೌಕರರು ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಭಟ್ಕಳ (Bhatkal) ತಾಲೂಕಿನ ಕಾರ್ಮಿಕ ನಿರೀಕ್ಷಕರಿಗೆ (labour inspector) ಮನವಿ ಸಲ್ಲಿಸಿದರು (appeal).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಪೌರ ನೀರು ಸರಬರಾಜು ನೌಕರರು, ವಾಹನ ಚಾಲಕರು, ಯುಜಿಡಿ ನೌಕರರು, ಸ್ಯಾನಿಟರಿ ಸೂಪರ್‌ವೈಸರ್‌ಗಳು, ಅಕೌಂಟೆಂಟ್‌ಗಳು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ (appeal).

Case registered/ ಯುವತಿಯ ಕಾರಿನಲ್ಲಿ ಕರೆದೊಯ್ದ ಯುವಕನ ವಿರುದ್ಧ ಪ್ರಕರಣ ದಾಖಲು

ಈ ಸಂದರ್ಭದಲ್ಲಿ ಭಟ್ಕಳ ನಗರಸಭೆಯ (CMC) ಹೊರಗುತ್ತಿಗೆ ಪೌರ ನೀರು ಸರಬರಾಜು ನೌಕರರು, ವಾಹನ ಚಾಲಕರು, ಯುಜಿಡಿ ನೌಕರರು ಹಾಗೂ ಜಾಲಿ ಪಟ್ಟಣ ಪಂಚಾಯಿತಿಯ ಹೊರಗುತ್ತಿಗೆ ಪೌರ ನೀರು ಸರಬರಾಜು ನೌಕರರು ಮತ್ತು ವಾಹನ ಚಾಲಕರು ಉಪಸ್ಥಿತರಿದ್ದರು.

Complaint/ ಹಿಂದು ಯುವತಿಯೊಂದಿಗೆ ಮುಸ್ಲಿಂ ಯುವಕ; ತಡೆದ ಹಿಂದೂ ಕಾರ್ಯಕರ್ತರ ಮೇಲೆ ದೂರು