ಭಟ್ಕಳ (Bhatkal): ಇಲ್ಲಿನ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ (Appu Fans) ಸೇವಾದಳದ ಕಾರ್ಯಕರ್ತರು ಅನಾರೋಗ್ಯ ಪೀಡಿತ ಬಡ ಮಹಿಯೋರ್ವಳ ಚಿಕಿತ್ಸೆಗೆ ದಾನಿಗಳ ಸಹಾಯದಿಂದ ಸಂಗ್ರಹಸಿದ ಮೊತ್ತವನ್ನು ಅವರ ಕುಟುಂಬಸ್ತರಿಗೆ ಹಸ್ತಾಂತರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯಲ್ವಡಿಕವೂರ ಪಂಚಾಯತ ವ್ಯಾಪ್ತಿಯ ಹಡೀನ ಕುಂಜಿಮನೆ ನಿವಾಸಿ ಮಾದೇವಿ ಶುಕ್ರಯ್ಯ ದೇವಾಡಿಗ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರಿಗೆ ಗಂಡ ಅಥವಾ ಮಕ್ಕಳಾಗಲಿ ಯಾರು ಇಲ್ಲ. ಈ ಬಗ್ಗೆ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ (Appu Fans) ಸೇವಾದಳದ ಸದಸ್ಯರಾದ ತಿಮ್ಮಯ್ಯ ನಾಯ್ಕ, ಕಳೆದ ಒಂದು ವಾರದ ಹಿಂದಷ್ಟೇ ಆಕೆಯ ಮನೆಗೆ ಭೇಟಿ ನೀಡಿ ಅವರ ಪರಿಸ್ಥಿತಿ ಗಮನಿಸಿದ್ದರು. ಅವರ ಚಿಕಿತ್ಸೆಗೆ ಹಣದ ಸಹಾಯ ಬೇಕಿದ್ದು ಚಿಕಿತ್ಸೆಗೆ ಹಣ ನೀಡುವ ಆಸಕ್ತ ದಾನಿಗಳು ತಮ್ಮ ನಂಬರಗೆ ಹಣ ಕಳಿಸುವಂತೆ ವಾಟ್ಸಾಪ್ ಮೂಲಕ ಕೇಳಿಕೊಂಡಿದ್ದರು. ಅದರಂತೆ ತಾಲೂಕಿನ ವಿವಿಧೆಡೆಯಿಂದ ಒಟ್ಟು ೨೭೧೧೦ ರೂ. ಹಣ ಸಂಗ್ರಹವಾಗಿತ್ತು.
ಇದನ್ನೂ ಓದಿ : ಬೈಕ್ ಡಿಕ್ಕಿ; ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು
ಇಂದು ರವಿವಾರ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳದ ಸದದ್ಯರು ಅವರ ಮನೆಗೆ ಭೇಟಿ ನೀಡಿ ಬಡ ಮಹಿಳೆಯ ಸಹೋದರಿಗೆ ಸಂಗ್ರಹವಾದ ಹಣವನ್ನು ಹಸ್ತಾಂತರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳದ ಸದಸ್ಯರಾದ ಗಣಪತಿ ನಾಯ್ಕ, ತಿಮ್ಮಯ್ಯ ನಾಯ್ಕ, ಪ್ರಮೋದ ನಾಯ್ಕ, ಅಶೋಕ ನಾಯ್ಕ ಉಪಸ್ಥಿತರಿದ್ದರು.
ಇದನ್ನೂ ಓದಿ : Murder Case/ ಗಣೇಶ ಕೂಡ್ರಿಸಿದ ಮನೆಯಲ್ಲಿ ಸೂತಕದ ಛಾಯೆ
ಇವರಿಗೆ ಸಹಾಯ ಮಾಡಲು ಇಚ್ಛಿಸುವ ದಾನಿಗಳು ಈ ಬಡ ಮಹಿಳೆಯ ಖಾತೆಗೆ ಹಣ ವರ್ಗಾಹಿಸುವಂತೆ ಕೇಳಿಕೊಂಡಿದ್ದಾರೆ. ಇವರ ಕೆನರಾ ಬ್ಯಾಂಕ್ ಭಟ್ಕಳ ಶಾಖೆಯ ಖಾತೆಯ ವಿವರ : Name : Madevi Sukrayya Devadig, A|C Nu: 110126120374, IFSC code :CNRB 0010360
ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.