ಬೆಂಗಳೂರು (Bengaluru): ಸೆ. 12ರಂದು 5 ಭಾಷೆಗಳಲ್ಲಿ ತೆರೆಗೆ ಬರಲಿರುವ ಎಆರ್‌ಎಂ (ARM) ಚಿತ್ರದ ಟ್ರೈಲರ್ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈಗಾಗಲೇ ಕೆಜಿಎಫ್ (KGF) ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (prashanth neel) ಟೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಂಬಾಳೆ ಫಿಲಂಸ್ ನ (hombale films) ವಿಜಯ್ ಕಿರಗಂದೂರು (Vijay Kirgandur), ಚೆಲುವೇಗೌಡ ಅವರು ಕೂಡ ಟ್ರೈಲರ್ ನೋಡಿ ಸಂತಸ ಪಟ್ಟಿದ್ದಾರೆ. ಟೊವಿನೋ ಥಾಮಸ್‌ (Tovino Thomas) ನಾಯಕನಾಗಿ ನಟಿಸಿರುವ “ಎಆರ್‌ಎಂ” ಸಿನಿಮಾ  ಸೆಪ್ಟೆಂಬರ್‌ 12ರಂದು ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ : ಸೆಪ್ಟೆಂಬರ್‌ ೧೧ರಂದು ವಿವಿಧೆಡೆ ಅಡಿಕೆ ಧಾರಣೆ

ಮ್ಯಾಜಿಕ್ ಫ್ರೇಮ್ಸ್  (magic frames) ಬ್ಯಾನರ್ ಅಡಿಯಲ್ಲಿ ಲಿಸ್ಟಿನ್ ಸ್ಟೀಫನ್ ಮತ್ತು UGM ಮೂವೀಸ್ ಅಡಿಯಲ್ಲಿ ಡಾ. ಜಕರಿಯಾ ಥಾಮಸ್ ಸಿನಿಮಾವನ್ನು ನಿರ್ಮಿಸಿದ್ದಾರೆ. ಮಲಯಾಳಂ (Malayalam) ಚಿತ್ರರಂಗದಿಂದ ಬಾಲಿವುಡ್‌ನಲ್ಲೂ ಛಾಪು ಮೂಡಿಸಿರುವ ಜೋಮನ್ ಟಿ. ಜಾನ್(Jomon T. John) ಅವರ ಛಾಯಾಗ್ರಹಣ ಮತ್ತು ಶಮೀರ್ ಮುಹಮ್ಮದ್ (Shameer Muhammed)  ಅವರ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ : ಗಮನಸೆಳೆದ ಮುದ್ದುಕೃಷ್ಣ – ಮುದ್ದು ರಾಧೆ ಸ್ಪರ್ಧೆ

ದಿಬು ನೈನನ್ ಥಾಮಸ್ (dhibu ninan thomas) ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ಕನಾ ಮತ್ತು ನಟ ಸಿದ್ಧಾರ್ಥ್‌ ಅವರ ಚಿತ್ತಾ ಸಿನಿಮಾಗಳಿಗೂ ಸಂಗೀತ ನೀಡಿದ್ದರು. ತಮಿಳು (Tamil), ತೆಲುಗು (Telugu) ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ನಟಿಯರಾದ ಕೃತಿ ಶೆಟ್ಟಿ (Krithi Shetty), ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ , ಬೇಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಕಬೀರ್ ಸಿಂಗ್, ಪ್ರಮೋದ್ ಶೆಟ್ಟಿ, ರೋಹಿಣಿ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ : ಕ್ರೀಡಾಕೂಟದಲ್ಲಿ ಆರ್.ಎನ್. ಶೆಟ್ಟಿ ಪಪೂ ಕಾಲೇಜು ಸಾಧನೆ

ಸುಜಿತ್ ನಂಬಿಯಾರ್ಚಿ ಕಥೆ ಬರೆದಿದ್ದಾರೆ. ಅವರ ಜತೆಗೆ ದೀಪು ಪ್ರದೀಪ್ ಸಾಥ್‌ ನೀಡಿದ್ದಾರೆ. ವಿಕ್ರಮ್ ಮೂರ್, ಫೀನಿಕ್ಸ್ ಪ್ರಭು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌, ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್‌ ಮತ್ತು ಹಿಂದಿಯಲ್ಲಿ ಅನಿಲ್ ಥಡಾನಿ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.