ಭಟ್ಕಳ (Bhatkal) : ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ಮುಸುಕುಧಾರಿಯಾಗಿ ಕಾರಿನಲ್ಲಿ ಬಂದು ಗೋವನ್ನು ಕದ್ದು ಹೋದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ (Arrest of thieves).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉಡುಪಿ (Udupi) ಜಿಲ್ಲೆಯ ಕಾಪು ನಿವಾಸಿ ಜಬ್ಬಾರ ಹುಸೇನ್  ಮಯದ್ದಿ ಬ್ಯಾರಿ, ಭಟ್ಕಳದ ಜಲೀಲ್ ಹುಸೇನ್ ಪಿ.ಕೆ ಮಯದ್ದಿ ಮತ್ತು ಹೆಬಳೆ ಜಾಮಿಯಾಬಾದ್ ನಿವಾಸಿ ಮಹ್ಮದ್ ಹನೀಫ್ ಮೋಹಿದ್ದಿನ್ ಅಬ್ದುಲ್ ಖಾದರ್ ಬಂಧಿತರು. ಈ ಮೂವರು ಶುಕ್ರವಾರ ಮುಂಜಾನೆ ೩.೧೫ರ ಸುಮಾರಿಗೆ ಜಾಲಿ ಬ್ಯಾಂಕ್ ಸಮೀಪ ಕಾರಿನಲ್ಲಿ ಬಂದಿದ್ದರು.  ತಮ್ಮ ಗುರುತು ಪತ್ತೆಯಾಗದಂತೆ ಮುಖಕ್ಕೆ ಮುಖಗವಸ ಧರಿಸಿದ್ದರು. ರಸ್ತೆಯಲ್ಲಿದ್ದ ಗೋವಿಗೆ ಆಹಾರ ನೀಡುವ ನೆಪದಲ್ಲಿ ಗೋವಿನ ಸಮೀಪ ಹೋಗಿ ಬಳಿಕ ಅದನ್ನು ಎತ್ತಿ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ :  ಮಧ್ಯರಾತ್ರಿವರೆಗೂ ಓದುತ್ತಿದ್ದ ವಿದ್ಯಾರ್ಥಿನಿ ಸಾವು

ಈ ಎಲ್ಲಾ ದ್ರಶ್ಯಗಳು ಅಲ್ಲೇ ಸಮೀಪವಿದ್ದ ಮನೆಯೊಂದರ ಸಿಸಿಟಿವಿಯಲ್ಲಿ (cctv) ಸೆರೆಯಾಗಿತ್ತು. ಸ್ಥಳೀಯರು ಶೀಘ್ರವಾಗಿ ಗೋಕಳ್ಳರನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ನೀಡಿ ಆಗ್ರಹಿಸಿದ್ದರು.  ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಲಿಸಿಕೊಂಡ ನಗರ ಪೋಲಿಸ್ ಠಾಣೆ ಪಿಐ ಗೋಪಿಕೃಷ್ಣ ಕೆ.ಆರ್. ತಮ್ಮ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ಆರಂಭಿಸಿದ್ದರು.

ಇದನ್ನೂ ಓದಿ :  ಕಾರಿಗೆ ಡಿಕ್ಕಿ; ಗಾಯಾಳು ಬೈಕ್‌ ಸವಾರನ ವಿರುದ್ಧವೇ ದೂರು

ಸಿಸಿಟಿವಿ ಆಧಾರದಲ್ಲಿ ಗೋ ಕಳ್ಳತನದ ಹಳೆಯ ಪ್ರಕರಣದ ಆರೋಪಿಗಳ ತನಿಖೆ ನಡೆಸಿದಾಗ ಓರ್ವ ಆರೋಪಿ ಬಗ್ಗೆ ಸುಳಿವು ಸಿಕ್ಕಿತು.  ಆತ ಪಡುಬಿದ್ರಿಯಲ್ಲಿ ಇರುವುದು ತಿಳಿದು ಬಂತು. ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು ಪಡುಬಿದ್ರಿಗೆ ತೆರಳಿ ಆರೋಪಿ ಜಬ್ಬಾರ ಹುಸೇನ್ ಮಯದ್ದಿ ಬ್ಯಾರಿಯನ್ನು ಬಂಧಿಸಿದರು. ಈತನ ವಿಚಾರಣೆ ಬಳಿಕ ಮತ್ತಿಬ್ಬರ ಆರೋಪಿಗಳ ಮಾಹಿತಿ ಕಲೆಹಾಕಿ ಮತ್ತಿಬ್ಬರು ಆರೋಪಿಗಳನ್ನು ಭಟ್ಕಳದಲ್ಲಿ ಬಂಧಿಸಿದ್ದಾರೆ (Arrest of thieves).  ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ :   ನ.೧ರಂದು ಝಗಮಗಿಸಲಿದೆ ಉತ್ತರ ಕನ್ನಡ

ಪೊಲೀಸ್ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ  ಕೆ.ಆರ್.‌ ನೇತೃತ್ವದ ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಗಳಾದ ತಿಮ್ಮಪ್ಪ ಎಸ್., ಸೋಮರಾಜ ರಾಠೋಡ, ಎ.ಎಸ್.ಐ ಗೋಪಾಲ ನಾಯಕ, ರವಿ ನಾಯ್ಕ, ಹವಾಲ್ದಾರರಾದ ಜಯರಾಮ ಹೊಸಕಟ್ಟಾ, ಗಿರೀಶ ಅಂಕೋಲೆಕರ, ಉದಯ ನಾಯ್ಕ, ದೀಪಕ. ಎಸ್. ನಾಯ್ಕ, ದೇವು ನಾಯ್ಕ, ಅರುಣ ಪಿಂಟೋ, ಬಂಗಾರಪ್ಪ ಓಣಿಕೇರಿ, ಕಿರಣ ನಾಯ್ಕ, ಪೊಲೀಸ ಸಿಬ್ಬಂದಿ ಮಹಾಂತೇಶ, ಕಾಶೀನಾಥ, ಕಿರಣ ಪಾಟೀಲ, ಕೃಷ್ಣ. ಎನ್.ಜಿ ಪಾಲ್ಗೊಂಡಿದ್ದರು.

ಇದನ್ನೂ ಓದಿ :  ಕಾರಿಗೆ ಡಿಕ್ಕಿ; ಗಾಯಾಳು ಬೈಕ್‌ ಸವಾರನ ವಿರುದ್ಧವೇ ದೂರು