ಭಟ್ಕಳ(Bhatkal) : ವೇಶ್ಯಾವಾಟಿಕೆ ನಡೆಯುತ್ತಿದ್ದ ಖಚಿತ ಸುಳಿವಿನ ಮೇರೆಗೆ ಮುರ್ಡೇಶ್ವರದ (Murdeshwar) ಲಾಡ್ಜ್‌ ಮೇಲೆ ದಾಳಿ ನಡೆಸಿದ ಕಾರವಾರದ ಸಿಇಇನ್‌ ಠಾಣೆ ಪೊಲೀಸರು (CEN police) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ (Arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಿದ್ದಾಪುರ (Siddapura) ತಾಲೂಕಿನ ದೊಡ್ಡ್ಮನೆ ಬಳೂರು ನಿವಾಸಿ ಮೋಹನ ಮಾಬ್ಲು ಗೌಡ ಮತ್ತು ಶಿವಮೊಗ್ಗ (Shivamogga) ಜಿಲ್ಲೆಯ ಸೊರಬ (Soraba) ತಾಲೂಕಿನ ತವನಂದಿ ನಿವಾಸಿ ಶಿವಕುಮಾರ ಬಂಗಾರಪ್ಪ ನಾಯ್ಕ ಬಂಧಿತರು(Arrested). ಇವರು ಮುರ್ಡೇಶ್ವರದ ಶೆಟ್ಟರಕೇರಿಯ ಈಶ್ವರ ಶನಿಯಾರ ನಾಯ್ಕ ಸಹಯೋಗದಲ್ಲಿ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು (Hiriyuru) ತಾಲೂಕಿನ ಮಹಿಳೆಯನ್ನು ಇಟ್ಟುಕೊಂಡು ಮುರ್ಡೇಶ್ವರದ (Murudeshwara) ಹೈಲ್ಯಾಂಡ್‌ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಮಧ್ಯರಾತ್ರಿ ೧ ಗಂಟೆಯ ಸುಮಾರಿಗೆ ಸಿಇಇನ್‌ ಡಿವೈಎಸ್ಪಿ ಅಶ್ವಿನಿ ಬಿ. ನೇತೃತ್ವದಲ್ಲಿ ಈ ದಾಳಿ ನಡೆದಿತ್ತು. ದಾಳಿಯ ವೇಳೆ ನೊಂದ ಮಹಿಳೆ ಸ್ಥಳದಿಂದ ಓಡಿ ಹೋಗಿದ್ದಾಳೆ. ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ಇದನ್ನೂ ಓದಿ : Sunil Naik/ ಸೂತ್ರವಿಲ್ಲದ ಗಾಳಿಪಟದಂತಾಗಿದೆ ಭಟ್ಕಳ ಕ್ಷೇತ್ರ