ಅಂಕೋಲಾ : ಮನೆಯೊಳಗೆ ನುಗ್ಗಿ ದೇವರ ಮೂರ್ತಿಗಳನ್ನು ಕದ್ದೊಯ್ದ ೬ ಜನ ಕುಖ್ಯಾತ ಆರೋಪಿತರನ್ನು ೨೪ ಗಂಟೆಯೊಳಗೆ ಬಂಧಿಸುವಲ್ಲಿ (Arrest) ಅಂಕೋಲಾ (Ankola) ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ನಾಲ್ವರು ಕಾರವಾರದವರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕದ್ರಾ (Kadra) ಕೆಪಿಸಿ (KPC) ನೌಕರ ಜಿ. ಶ್ರೀನಿವಾಸ ಗುರುಸ್ವಾಮಿ (೪೧), ಧಾರವಾಡ (Dharwad) ಲಕ್ಷ್ಮಿಗಿರಿಯ ಹಾಲಿ ಕಾರವಾರದ (Karwar) ಚಿತ್ತಾಕುಲದಲ್ಲಿ ವಾಸವಾಗಿದ್ದ ಅಶೋಕ ಹನುಮಂತಪ್ಪ ಬಂಡಿವಡ್ಡರ (೨೬), ಕದ್ರಾ ರಾಜೀವ ನಗರದ ಮೌಲಾಲಿ ತಂದೆ ಮಹ್ಮದ ಅಜಾದ ಸೈಯದ (೩೦), ಬೆಂಗಳೂರು (Bengaluru) ವೈಟ್ ಫೀಲ್ಡ್ (Whitefield) ಮೂಲದ ಕದ್ರಾ ರಾಜೀವ ನಗರದ ಮುಬಾರಕ ತಂದೆ ಇಬ್ರಾಹಿಂ ಶೇಖ (೨೬), ಬೆಂಗಳೂರು ವೈಟ್ ಫೀಲ್ಡ್ ವಾಸಿ ಎ.ಎಸ್. ಶೇಖ್ ಶರೀಫ್ ತಂದೆ ಎ.ಎಸ್. ಅಬ್ದುಲ್ ರಹೀಮ್ (೩೬) ಮತ್ತು ಮೈಸೂರಿನ (Mysuru) ಫುರಖಾನ ತಂದೆ ಮೆಹಬೂಬಖಾನ (೨೨) ಬಂಧಿತ (Arrest) ಆರೋಪಿಗಳು. ಬಂಧಿತರಿಂದ ಇನ್ನೋವಾ (Innova) ಕ್ರೀಸ್ಟಾ ವಾಹನ, ಮಾರುತಿ ಸುಜುಕಿ (Maruti Suzuki) ಸ್ವೀಪ್ಟ್ ಕಾರ್, ಮಹೀಂದ್ರಾ (Mahindra) ಜೈಲೋ ಮತ್ತು ಡಿಯೋ (Dio) ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತರು ಕೃತ್ಯಕ್ಕೆ ಬಳಸಿದ ವಾಹನಗಳಲ್ಲಿ ಇದ್ದ ಒಟ್ಟು ೧೬ ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಭಟ್ಕಳ ಠಾಣೆಗೆ ಭೇಟಿ ನೀಡಿದ ಮುಟ್ಟಳ್ಳಿ ಶಾಲಾ ಮಕ್ಕಳು
ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ತಿಂಗಳ ವಾಸಿ ಪಿಡಿಓ (PDO) ವಿಠಲ ವಾಸು ಬಾಂದಿ (೫೮) ಅವರ ಮನೆಯಲ್ಲಿ ಡಿ.೮ರ ೧೧.೩೦ರಿಂದ ಡಿ.೯ರ ೨.೩೦ರ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಅಂಕೋಲಾ ಠಾಣೆಯ ಪಿಎಸ್ಐ ಜಯಶ್ರೀ ಪ್ರಭಾಕರ ದೂರು (complaint) ದಾಖಲಿಸಿಕೊಂಡಿದ್ದರು. ಮನೆಯಲ್ಲಿ ಎಲ್ಲರೂ ಮಲಗಿರುವಾಗ, ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಕೋಣೆಯಲ್ಲಿದ್ದ ೧.೩೦ ಲಕ್ಷ ರೂಪಾಯಿ ಮೌಲ್ಯದ ಹಿತ್ತಾಳೆಯ ೪೭ ದೇವರ ಮೂರ್ತಿಗಳು, ೫ ಕಪಿಲ್ ಕಲ್ಲುಗುಂಡುಗಳು ಹಾಗೂ ಮನೆಯಲ್ಲಿದ್ದ ಹಳೆಯ ನೋಕಿಯಾ (Nokia) ಮೊಬೈಲ್ ಕಳುವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (case registered).
ಇದನ್ನೂ ಓದಿ : Rain/ ಉತ್ತರ ಕನ್ನಡ ಸಹಿತ ಹಲವೆಡೆ ಯೆಲ್ಲೋ ಅಲರ್ಟ್
ಎಸ್ಪಿ ಎಮ್. ನಾರಾಯಣ, ಎಎಸ್ಪಿ ಎಮ್.ಜಗದೀಶ ಮತ್ತು ಕಾರವಾರ ಡಿವೈಎಸ್ಪಿ ಗಿರೀಶ ಎಸ್.ವಿ. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿತ್ತು. ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ನೇತೃತ್ವದ ತಂಡ ೨೪ ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿ.ಎಸ್.ಐ.ಗಳಾದ ಉದ್ದಪ್ಪ ದರೆಪ್ಪನವರ, ಜಯಶ್ರಿ ಪ್ರಭಾಕರ ಮತ್ತು ಸಿಬ್ಬಂದಿ ಮಹಾದೇವ ಸಿದ್ದಿ, ಅಂಬರೀಶ ನಾಯ್ಕ, ಪ್ರಶಾಂತ ನಾಯ್ಕ, ಸಿಪಿಸಿಗಳಾದ ಶ್ರೀಕಾಂತ ಕಟಬರ, ಮನೋಜ ಡಿ, ಆಸಿಫ್ ಆರ್ ಕೆ. ರೋಹಿದಾಸ ದೇವಾಡಿಗ, ಶಿವಾನಂದ ನಾಗರದಿನ್ನಿ, ಜೀಪ ಚಾಲಕ ಸತೀಶ ನಾಯ್ಕ, ಎಪಿಸಿ ರವಿ ಹಡಪದ ಹಾಗೂ ಕಾರವಾರ ಗ್ರಾಮೀಣ ಠಾಣೆಯ ಸಿಪಿಸಿ ಹನುಮಂತ ಸರೀಕರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ : ನೀರಲ್ಲಿ ಮುಳುಗಿ ಓರ್ವ ವಿದ್ಯಾರ್ಥಿನಿ ಸಾವು, ಮೂವರು ನಾಪತ್ತೆ