ಭಟ್ಕಳ: ನಾಲ್ಕು ಜನರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ (assault) ನಡೆಸಿರುವ ಘಟನೆ ಭಟ್ಕಳ (Bhatkal) ತಾಲೂಕಿನ ಮಾವಿನಕುರ್ವೆಯ ಕರಿಕಲ್ ಗ್ರಾಮದಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕರಿಕಲ್ ಗ್ರಾಮದ ಶಿವಾನಂದ ಮೊಗೇರ ಹಲ್ಲೆಗೊಳಗಾದವರಾಗಿದ್ದು, ಸ್ಥಳೀಯರಾದ ನಾಗರಾಜ ತಂದೆ ಮಂಜುನಾಥ ಮೊಗೇರ, ಆನಂದ ತಂದೆ ರಾಮ ಮೊಗೇರ, ವಸಂತ ಶಂಕರ ಮೊಗೇರ ಮತ್ತು ಲಕ್ಷ್ಮೀಶ ತಂದೆ ಶ್ರೀಧರ ಮೊಗೇರ ವಿರುದ್ಧ ಅವರ ಪತ್ನಿ ರಶ್ಮಿ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Clock Tower/ ಭಟ್ಕಳ ವೃತ್ತದ ಗಡಿಯಾರ ಗೋಪುರ ಇನ್ನು ನೆನಪು ಮಾತ್ರ
ಆರೋಪಿತರು ದಿನಾಂಕ:೨೭-೦೨-೨೦೨೬ರ ರಾತ್ರಿ ೮ ಗಂಟೆಯ ಸುಮಾರಿಗೆ ಶಿವಾನಂದ ಮೊಗೇರ ಇವರು ಮನೆಯಲ್ಲಿ ಇರುವಾಗ ಮನೆಯ ಹತ್ತಿರ ಬಂದು ಹಲ್ಲೆ (assault ) ನಡೆಸಿರುವುದಾಗಿ ದೂರಲಾಗಿದೆ. ಪ್ರಶ್ನಿಸಿದ್ದಕ್ಕೆ ಶಿವಾನಂದ ಮೊಗೇರ ಅವರ ಪತ್ನಿ ರಶ್ಮಿ ಮತ್ತು ತಂದೆ ಅವರನ್ನು ದೂಡಿದ್ದು, ಮತ್ತೆ ಹೊರಗೆ ಸಿಕ್ಕಾಗ ಹೊಡಿತೀವಿ ಎಂದು ಆವಾಜ್ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅರ್ಜಿದಾರರು ನೀಡಿದ ದೂರು ಅಸಂಜ್ಞೆಯ ಸ್ವರೂಪದ ದೂರಾಗಿದ್ದರಿಂದ ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಳ್ಳಲು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Stone pelting/ ಬೈಲೂರು ಕಲ್ಲುತೂರಾಟಕ್ಕೆ ಮಾದಕ ದ್ರವ್ಯ ಕಾರಣ: ಸರಬರಾಜು ಮಾಡುತ್ತಿದ್ದ ವ್ಯಕ್ತಿ ಬಂಧನ



