ಹೊನ್ನಾವರ (Honnavar): ಹಳೇ ಆರೋಪಿಗಳ ವಿಚಾರಣೆಗೆ ತೆರೆಳಿದ್ದ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದಿರುವ (Assault)ಬಗ್ಗೆ ಮಂಕಿ ಪೊಲೀಸ್‌ ಠಾಣೆಯಲ್ಲಿ (Police Station)ಪ್ರಕರಣ ದಾಖಲಾಗಿದೆ(Case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅನಂತವಾಡಿಯ ಕೋಟಾ ಗ್ರಾಮದ ನಿವಾಸಿ ಕೃಷ್ಣ ಕನ್ಯಾ ಗೌಡ ಆರೋಪಿಯಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡಿಪಡಿಸಿದ ಬಗ್ಗೆ ದೂರು ದಾಖಲಾಗಿದೆ. ಶುಕ್ರವಾರ ಅಬಕಾರಿ ಇಲಾಖೆಯ ನಿರೀಕ್ಷಕ ಶ್ರೀಧರ ಮಡಿವಾಳ, ಮುಖ್ಯ ಪೇದೆಗಳಾದ ಸುರೇಶ ಹಾರೋಗೊಪ್ಪ, ವಿಠ್ಠಲ ಕುಂಬಾರ ಮತ್ತು ಪೇದೆ ಸಿದ್ದಪ್ಪ ಕುರಿಹುಲಿ ಸರ್ಕಾರಿ ವಾಹನದಲ್ಲಿ ಹಳೇ ಆರೋಪಿಗಳ ವಿಚಾರಣೆಗೆ ಕೋಟಾ ಗ್ರಾಮಕ್ಕೆ ಹೋಗಿದ್ದರು.

ಇದನ್ನೂ ಓದಿ : ಬೆಂಗಳೂರಿನಿಂದ ಬಂದ ಕರಾವಳಿಗರಿಗೆ ಶಾಕಿಂಗ್ ನ್ಯೂಸ್

೨೦೧೦ರ ಡಿ.೯ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಗೋಪಾಲ ಕನ್ಯಾ ಗೌಡ ಮತ್ತು ಮಂಜುನಾಥ ಕನ್ಯಾ ಗೌಡರನ್ನು ವಿಚಾರಣೆ ನಡೆಸಿದ್ದರು. ನಂತರ ಅಧಿಕಾರಿಗಳ ಸೂಚನೆಯಂತೆ ಸಂಜೆ ೪.೩೦ರ ಸುಮಾರಿಗೆ ಮುಖ್ಯ ಪೇದೆಗಳು ಕೃಷ್ಣ ಕನ್ಯಾ ಗೌಡರನ್ನು ವಿಚಾರಿಸಲು ಅವರ ಮನೆಗೆ ಹೋದಾಗ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ (Assault)ನಡೆಸಲು ಮುಂದಾಗಿದ್ದಾರೆ. ಮುಖ್ಯ ಪೇದೆಗಳಿಬ್ಬರೂ ಸ್ವರಕ್ಷಣೆಗೆ ತಡೆಯಲು ಮುಂದಾದಾಗ ತಮ್ಮ ಹಣೆ ಮತ್ತು ಬಲಗಡೆಯ ಭುಜದ ಮೇಲೆ ಹಲ್ಲೆ ಮಾಡಿರುವುದಾಗಿ ವಿಠ್ಠಲ ಕುಂಬಾರ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ :  ಮುಸ್ಲಿಂ ಮತಗಳಿಂದ ಗೆದ್ದು ಸಚಿವರಾಗಿರುವವರು ಏಕೆ ಸುಮ್ಮನಿದ್ದಾರೆ?