ಭಟ್ಕಳ (Bhatkal) : ಗುರಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವ (Assaulted) ಬಗ್ಗೆ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೈಲೂರು ದೊಡ್ಡ ಬಲಸೆಯ ಈಶ್ವರ ನಾಯ್ಕ (೫೦) ವಿರುದ್ಧ ಅದೇ ಊರಿನ ವೆಂಕಟೇಶ ಗಣಪಯ್ಯ ನಾಯ್ಕ (೫೯) ವಿರುದ್ಧ ದೂರು ದಾಖಲಿಸಿದ್ದಾರೆ. ಮಾ.೧೭ರಂದು ಬೆಳಿಗ್ಗೆ ೧೧.೧೫ರ ಸುಮಾರಿಗೆ ಮಾರ್ಕೆಟ್‌ಗೆ ಹೋಗುವ ಸಲುವಾಗಿ ಈಶ್ವರ ನಾಯ್ಕ ತಮ್ಮ ಮನೆಯ ಮುಂದೆ ನಿಂತಿದ್ದರು. ಅದೇ ಸಮಯಕ್ಕೆ ಈಶ್ವರ ನಾಯ್ಕ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ತಮ್ಮನ್ನು ನೋಡಿ ಗುರಾಯಿಸಿದ್ದಾರೆ. ಯಾಕೆ ಗುರಾಯಿಸುತ್ತೀಯಾ ಎಂದು ಕೇಳಿದ್ದಕ್ಕೆ ನನ್ನ ಕಣ್‌ಣು, ನನ್ನ ಇಷ್ಟ, ಅದನ್ನು ಕೇಳುವವನು ನೀನು ಯಾರು ಅಂತ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ  ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಬಿಯಿರ್‌ ಬಾಟಲಿಯಿಂದ ಹಲ್ಲೆ ನಡೆಸಿರುವುದಾಗಿ ((Assaulted) ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Judicial custody/ ಸೊಸೈಟಿಯಲ್ಲಿ ಕಳ್ಳತನ ಆರೋಪಿಗೆ ನ್ಯಾಯಾಂಗ ಬಂಧನ