ಗೋಕರ್ಣ(Gokarna): ಪ್ರಕೃತಿ ಕೊಡುವ ಸೂಚನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಅದನ್ನು ತಿಳಿದುಕೊಂಡು ನಮ್ಮ ಪೂರ್ವಜರು ಕೃತಿರೂಪದಲ್ಲಿ ತಂದು ಆ ಅಪೂರ್ವ ಜ್ಞಾನ ಪರಂಪರೆ ಮುಂದುವರಿಸಿದ್ದಾರೆ. ಇದನ್ನು ತಿಳಿದುಕೊಂಡರೆ ನಮ್ಮ ಜೀವನ ಸುಲಭ. ಜ್ಯೋತಿಷ್ಯ(Astrology) ಶಾಸ್ತ್ರವೆಂಬ ದೀಪದ ಮೂಲಕ ನಾವು ಬದುಕು ಅರ್ಥ ಮಾಡಿಕೊಳ್ಳಬಹುದು ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುಮಾಸ್ಯ ಕೈಗೊಂಡಿರುವ ಶ್ರೀಗಳು ೨೯ನೇ ದಿನ ‘ಕಾಲ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿದರು. ಪ್ರಶ್ನ ಜ್ಯೋತಿಷ್ಯ, ತಾಂಬೂಲ ಜ್ಯೋತಿಷ್ಯ, ಜಾತಕ, ಶಕುನಶಾಸ್ತ್ರ ಹೀಗೆ ವಿವಿಧ ಪ್ರಕಾರಗಳಿಂದ ಕಾಲನ ಭಾಷೆಯನ್ನು ತಿಳಿಯಬಹುದು. ನಮ್ಮ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಕೃತಿ ನಮಗೆ ಹಲವು ಮಾರ್ಗಗಳನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ : ಅಮಲೇರಿ ಗಟಾರಕ್ಕೆ ಬಿದ್ದವ ಚಿಕಿತ್ಸೆಗೆ ಸ್ಪಂದಿಸದೆ ಸಾವು
ಕಾಲ ನಮ್ಮೊಂದಿಗೆ ಮಾತನಾಡುತ್ತದೆ. ಜ್ಯೋತಿಷ್ಯದ ಮೂಲಕ ಕಾಲದ ಭಾಷೆಯನ್ನು ಅರ್ಥ ಮಾಡಿಕೊಳ್ಳಬಹುದು. ಖಗೋಳದ ಮೂಲಕ ನಮ್ಮ ಬದುಕನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಖಗೋಳದಲ್ಲಿ ನಮ್ಮ ಸ್ಥಾನವನ್ನು ನಾವು ತಿಳಿದರೆ ಕಾಲನ ಬಾಷೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ನಿವೃತ್ತ ಶಿಕ್ಷಕಗೆ ಪತ್ನಿ ಸಹಿತ ಸನ್ಮಾನ
ಕಾಲ ನಮ್ಮ ಜೀವನದ ಪ್ರತಿ ಕ್ಷಣ ನಮ್ಮೊಂದಿಗೆ ಮಾತನಾಡುತ್ತಿರುತ್ತದೆ. ಅದನ್ನು ತಿಳಿದುಕೊಳ್ಳುವ ಕೌಶಲ ನಮಗಿದ್ದರೆ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಈಗ ಮಾಡುವ ಕರ್ಮಗಳ ಮೂಲಕ ನಮ್ಮ ಬದುಕನ್ನು ಬದಲಾಯಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಸಾರ್ವಜನಿಕರಿಗೆ ನಿರ್ಬಂಧ; ಸಚಿವ ಮಂಕಾಳ ವೈದ್ಯ ಪರಿಶೀಲನೆ
ಪ್ರಯತ್ನದ ಮೂಲಕ ನಮ್ಮ ಬದುಕು ಬದಲಾಯಿಸಿಕೊಳ್ಳಲು ಅವಕಾಶವಿದೆ. ನಮ್ಮ ಜನ್ಮಕುಂಡಲಿಯ ಮೂಲಕ ನಮ್ಮ ಬದುಕನ್ನು ಕಂಡುಕೊಂಡು ಸತ್ಕಾರ್ಯ ಅಥವಾ ಪರಿಹಾರದ ಮೂಲಕ ಬದಲಾಯಿಸಬಹುದು. ಜ್ಯೋತಿಷ್ಯದಲ್ಲಿ (Astrology) ಇಂಥದ್ದನ್ನು ತಿಳಿದುಕೊಳ್ಳುವ ಪ್ರಯತ್ನವೇ ಪ್ರಶ್ನ ಜ್ಯೋತಿಷ್ಯ ಎಂದರು.
ಇದನ್ನೂ ಓದಿ : ಮತ್ತೊಂದು ಬೈಕ್‌ಗೆ ಹಿಂಬದಿಯಿಂದ ಗುದ್ದಿದ ಬಸ್
ದಕ್ಷಿಣ ಬೆಂಗಳೂರು ಮಂಡಲದ ಶಿಷ್ಯಭಕ್ತರಿಂದ ಸರ್ವಸೇವೆ ನಡೆಯಿತು. ಬುತ್ತಿಬಳಗದ ಅನಾವರಣವನ್ನು ಡಾ.ಆರ್.ಸಿ.ಬಾರಧ್ವಾಜ್ ಮತ್ತು ವೆಂಕಟ್ರಮಣ ಹೆಗಡೆ ನೆರವೇರಿಸಿದರು. ಗುರುಕುಲದ ಮಕ್ಕಳಿಗೆ ಉತ್ತಮ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಉಚಿತವಾಗಿ ಪೂರೈಸುತ್ತಿರುವ ಬುತ್ತಿ ಬಳಗ ಇಂದು ಗುರುಕುಲದ ಆಧಾರವಾಗಿ ಬೆಳೆದಿದೆ. ಇಂಥ ಸಾರ್ಥಕ ಸೇವೆಗೆ ಇಡೀ ಸಮಾಜ ಕೈಜೋಡಿಸಲಿ ಎಂದು ಶ್ರೀಗಳು ಆಶಿಸಿದರು.
ಇದನ್ನೂ ಓದಿ : ಉ.ಕ.ದಲ್ಲಿ ಬಹು ಅಂಗಾಂಗ ದಾನಕ್ಕೆ ಕಾಣದ ಉತ್ಸಾಹ
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷರಾದ ಜಿ.ಜಿ.ಹೆಗಡೆ ತಲೆಕೇರಿ, ಜಿ.ಎಸ್.ಹೆಗಡೆ, ವಿಭಾಗ ಮುಖ್ಯಸ್ಥರಾದ ಹೇರಂಬ ಶಾಸ್ತ್ರಿ, ಈಶ್ವರಪ್ರಸಾದ್ ಕನ್ಯಾನ, ಕೇಶವ ಪ್ರಕಾಶ್ ಎಂ, ದಕ್ಷಿಣ ಬೆಂಗಳೂರು ಮಂಡಲ ಅಧ್ಯಕ್ಷ ಡಾ.ಶ್ರೀಪಾದ ಹೆಗಡೆ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ ಮುಡಾರೆ, ಶಾಸ್ತ್ರಿಗಳಾದ ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಬಿಂದು ಅವಧಾನಿ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ : ಖಗೋಳ ನಮ್ಮ ಬದುಕಿನ ಕನ್ನಡಿ: ರಾಘವೇಶ್ವರ ಸ್ವಾಮೀಜಿ