ಗೋಕರ್ಣ: ಒಂದು ಕಾಲದಲ್ಲಿ ದೇಶದ ಗಣಿತಕ್ಷೇತ್ರ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅದನ್ನು ಬಳಸಿಕೊಂಡು ಗ್ರಹಗತಿಗಳ ಚಲನೆಯನ್ನು ನಿಖರವಾಗಿ ಅಳೆಯುವ ವ್ಯವಸ್ಥೆ ನಮ್ಮ ಪೂರ್ವಿಕರಿಗೆ ಸಿದ್ಧಿಸಿತ್ತು. ನಮ್ಮ ಜ್ಯೋತಿಷ್ಯ ಶಾಸ್ತ್ರ (astrology)ಕ್ಕೆ ಇದೇ ಆಧಾರವಾಗಿತ್ತು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಸ್ವಾಮೀಜಿಯವರು, ‘ಕಾಲ’ ಮಾಲಿಕೆಯ ಪ್ರವಚನ ನೀಡಿದರು. ಆಯಾ ರಾಶಿಗಳು ನಮ್ಮ ಸ್ವಭಾವವನ್ನು ನಿರ್ಧರಿಸುತ್ತವೆ. ಉದಾಹರಣೆಗೆ ಮೇಷ ರಾಶಿಯವರನ್ನು ಸುಲಭವಾಗಿ ಸಂತಸಪಡಿಸಬಹುದು. ಅಪೇಕ್ಷೆಗಳು ಅಧಿಕ. ಸಂಪತ್ತು ಇವರಿಗೆ ಸ್ಥಿರವಲ್ಲ. ಶೌರ್ಯವಂತರೂ, ಅಂಗನೆಯವರನ್ನು ಅವಲಂಬಿಸಿರುತ್ತಾರೆ. ಸೇವಾಕೌಶಲ ಅಧಿಕ. ಚಪಲ- ಚಾಂಚಲ್ಯ ಬುದ್ಧಿ. ನೀರು ಕಂಡರೆ ಇವರಿಗೆ ಭಯ ಎಂದು ವಿವರಿಸಿದರು. ಇತರ ಗ್ರಹಗಳ ಸ್ಥಾನ ಕೂಡ ಪ್ರಭಾವ ಬೀರುವುದರಿಂದ ಒಂದೇ ರಾಶಿಯವರಿಗೆ ಫಲಗಳು ಬದಲಾಗುತ್ತವೆ. ನಾವು ಹುಟ್ಟುವಾಗ ಚಂದ್ರ ಇರುವ ರಾಶಿ ನಮ್ಮ ಮನಸ್ಸಿನಷ್ಟೇ ಮುಖ್ಯ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ : ‘ಕಡಲ ಕವಿ’ಯ ‘ಕಡಲಾಳದ ಕಾವ್ಯ’
ಮೇಷ ಅರಣ್ಯವನ್ನು ಸೂಚಿಸಿದರೆ, ವೃಷಭ ಗದ್ದೆಯನ್ನು, ಮಿಥುನ ಶಯನ ಗೃಹವನ್ನು, ಕರ್ಕಾಟಕ ರಾಶಿ ಕೆರೆ ಬಾವಿಯನ್ನು ಸೂಚಿಸಿದರೆ, ಸಿಂಹ ಬೆಟ್ಟವನ್ನು, ಕನ್ಯಾ ರಾಶಿ ಸಸ್ಯಾನ್ವಿತ ಭುವಿಯನ್ನು ಸೂಚಿಸುತ್ತದೆ. ಹೀಗೆ ಪ್ರತಿಯೊಂದು ರಾಶಿಯೂ ಒಂದೊಂದು ಅಂಶವನ್ನು ಸೂಚಿಸುತ್ತದೆ. ಕಾಲದ ರೂಪ ಭಗವಂತನಂತೆಯೇ. ಅದು ಕೂಡ ಇದೆ ಎಂದು ಗೊತ್ತಾಗುತ್ತದೆ. ಆದರೆ ಹೇಗೆ ಎಂದು ಸ್ವರೂಪವನ್ನು ವಿವರಿಸಲು ಸಾಧ್ಯವಿಲ್ಲ. ಎಲ್ಲರೂ ಕಾಲಕ್ಕೆ ಶರಣಾಗಬೇಕಾಗುತ್ತದೆ(astrology) ಎಂದರು.
ಇದನ್ನೂ ಓದಿ : ಶಿವಾನಂದ ಮೊಗೇರರ ‘ಕಡಲಾಳದ ಕಾವ್ಯ’ ಬಿಡುಗಡೆ
ಹಾಲಕ್ಕಿ ಸಮಾಜದ ಹೆಸರೇ ಸಮಾಜದ ಸ್ವಭಾವವನ್ನು ತಿಳಿಸುವಂಥದ್ದು. ಹಾಲು ಮತ್ತು ಅಕ್ಕಿ ಎರಡೂ ಶ್ರೇಷ್ಠ. ಅಂಥ ಎರಡು ಸಾತ್ವಿಕ ವಸ್ತುಗಳ ಹೆಸರಿನಿಂದ ಸಮಾಜದ ಮನಸ್ಸು ಕೂಡ ಹಾಲಿನಂತಿದೆ. ಸರ್ವ ಸಮಾಜಕ್ಕೆ ಹಾಲು ಮತ್ತು ಅಕ್ಕಿ ಕೊಡುವ ಸಮಾಜ ಅದು. ಸಸ್ಯಸೇವೆ ಮತ್ತು ಗೋಸೇವೆಯ ಮೂಲಕ ಸಮಾಜವನ್ನು ಪೋಷಿಸುವವರು. ಪ್ರತಿ ವರ್ಷದಂತೆ ದೊಡ್ಡ ಸಂಖ್ಯೆಯಲ್ಲಿ ಬಂದು ಸುವರ್ಣ ಪಾದುಕಾ ಸೇವೆಯನ್ನು ನೆರವೇರಿಸಿದ್ದಾರೆ. ಇಡೀ ಸಮಾಜಕ್ಕೆ ಸುವರ್ಣಕಾಲ ಬರಲಿ ಎಂದು ಆಶಿಸಿದರು.
ಇದನ್ನೂ ಓದಿ :ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ
ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ, ಮರಾಠಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಪಾಗೋಜಿ, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಶ್ರೀಗಳ ಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್, ಕೆ.ಎನ್.ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಧಾರೇಶ್ವರದಲ್ಲಿ ಗುಡ್ಡಕುಸಿತ
ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು. ಹಾಲಕ್ಕಿ ಸಮಾಜದವರಿಂದ ಸುವರ್ಣ ಪಾದುಕಾಪೂಜೆ ನೆರವೇರಿತು. ವಿನಾಯಕ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಭಕ್ತಮಂಟಪದ ಕೆಳಭಾಗದಲ್ಲಿರುವ ಶಿಲಾಹಾಸಿನ ಅಂಗಳವನ್ನು ವಿನಾಯಕ ಅನಾವರಣಗೊಳಿಸಿದರು.
ಇದನ್ನೂ ಓದಿ : ಕಾಲಪ್ರಜ್ಞೆಯ ಅರಿವು ಅಗತ್ಯ: ರಾಘವೇಶ್ವರ ಸ್ವಾಮೀಜಿ