ಭಟ್ಕಳ (Bhatkal) : ಮನೆಕಳ್ಳತನಕ್ಕೆ ಬರುವುದಿಲ್ಲ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ (Attack) ನಡೆಸಿರುವ ಘಟನೆ ತಾಲೂಕಿನ ಗುಳ್ಮಿ ಬಿಲಾಲಖಂಡದ ಬಳಿ ನಡೆದಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಉಸ್ಮಾನ ನಗರದ ಮಾರುಫ್‌ ತಂದೆ ಅಯೂಬ್‌ ಹಲ್ಲೆ (Attack) ನಡೆಸಿದ ಆರೋಪಿ. ಭಟ್ಕಳ ಪಟ್ಟಣದ ಸೆಂಟ್ರಲ್‌ ಲಾಡ್ಜ್‌ ಹತ್ತಿರದ ನಿವಾಸಿಯಾಗಿರುವ ಬಟ್ಟೆ ವ್ಯಾಪಾರಿ ಅಕ್ರಮ್‌ ಸೈಯದ್‌ ತಂದೆ ಮಹ್ಮದ್‌ ಹುಸೇನ್‌ (೨೪) ಹಲ್ಲೆಗೊಳಗಾದ ಯುವಕ. ಆ. ೨೨ರಂದು ಸಂಜೆ ೪.೩೦ರ ಸುಮಾರಿಗೆ ಅಕ್ರಮ್‌ ಸೈಯದ್‌ ತನ್ನ ಅತ್ತೆ ಮನೆಯಿರುವ ಗುಳ್ಮಿ ಬಿಲಾಲಖಂಡ ಹತ್ತಿರ ಹೋದಾಗ ಹಲ್ಲೆ ನಡೆದಿದೆ.

ಇದನ್ನೂ ಓದಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು

ಮಾದೇವ ಅಂಗಡಿ ಬಳಿ ನಿಂತಿದ್ದಾಗ ಆರೋಪಿ ಮಾರುಫ್‌ ಅಕ್ರಮ್‌ ಸೈಯದ್‌ ಬಳಿ ಬಂದಿದ್ದಾನೆ. ಖಾಲಿ ಇರುವ ಮನೆ ಕಳ್ಳತನ ಮಾಡುವುದಿದೆ, ಬಾ ಎಂದು ಮಾರುಫ್‌ ಕರೆದಿದ್ದಾನೆ. ಜೊತೆಗೆ ಒಂದು ಕಾರಿನ ವ್ಯವಸ್ಥೆ ಮಾಡುವಂತೆ ಹೇಳಿದ್ದಾನೆ. ಅದಕ್ಕೆ ಅಕ್ರಮ್‌ ಸೈಯದ್‌ ತಾನು ಸದ್ಯ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದು, ಕಳ್ಳತನಕ್ಕೆ ಬರುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಾರುಫ್‌, ಅಕ್ರಮ್‌ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಕಾರು ವ್ಯವಸ್ಥೆ ಮಾಡದೇ ಇದ್ದರೆ, ಮೋಟಾರ್‌ ಸೈಕಲ್‌ ತೆಗೆದುಕೊಂಡು ಹೋಗುವುದಾಗಿ ಹೇಳಿ ಚಾವಿಯೊಂದಿಗೆ ನಿಲ್ಲಿಸಿಟ್ಟಿದ್ದ ಮೋಟಾರ್‌ ಸೈಕಲ್‌ ತೆಗೆದುಕೊಂಡು ಹೋಗಿದ್ದಾನೆ. ಮೋಟಾರ್‌ ಸೈಕಲ್ಲಿನಲ್ಲಿ ೨೧,೮೦೦ ರೂ. ನಗದು ಕೂಡ ಇತ್ತೆಂದು ಅಕ್ರಮ ಸೈಯದ್‌ ದೂರಿನಲ್ಲಿ ತಿಳಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು ತನಿಖೆ (Investigation) ಕೈಗೊಂಡಿದ್ದಾರೆ.

ಇದನ್ನೂ ಓದಿ : H Halappa/ ಶರಾವತಿ ಒಡಲು ಬಗೆಯಲು ಮುಂದಾದರೆ ಕಾನೂನು ಹೋರಾಟ