ಭಟ್ಕಳ (Bhatkal) : ಆಟೋ ಡಿಕ್ಕಿಯಾಗಿ (Auto collision) ಮೋಟಾರ್ ಸೈಕಲ್ ಸವಾರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ‌ ೧.೧೫ರ ಸುಮಾರಿಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇಲೆಕ್ಟ್ರಿಕ್ ಕೆಲಸ‌ ಮಾಡುವ ಮೂಸಾನಗರ ನಿವಾಸಿ ಜಾಕೀರ್ ಅಹ್ಮದ್ ನೂರ ಅಹ್ಮದ್ (೨೯) ಗಾಯಗೊಂಡವರು. ಅವರ ಎಡಕೈ ಮತ್ತು ಭುಜಕ್ಕೆ ಗಾಯಗಳಾಗಿವೆ. ಆಟೋ ಚಾಲಕ ತಲಗೋಡಿನ ರಾಮಾ ಮಂಜು ಗೊಂಡ (೪೨) ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ :  ಅನಂತ ಶ್ರೀನಿವಾಸ ಪೈ ನಿಧನ

ಕಾಮಾಕ್ಷಿ ಪೆಟ್ರೊಲ್ ಬಂಕ್ ಕಡೆಯಿಂದ ಸಂಶುದ್ದಿನ ಸರ್ಕಲ್ ಕಡೆಗೆ ಬರುತ್ತಿದ್ದ ಆಟೋ ಭಟ್ಕಳ ಸರ್ಕಲ್ ನಿಂದ ಜಾಲಿ ಕ್ರಾಸ್ ಕಡೆಗೆ ಹೋಗುತ್ತಿದ್ದ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದಿದೆ (Auto collision).

ಇದನ್ನೂ ಓದಿ :  ಭಟ್ಕಳದಲ್ಲಿ ಮಿಸೆಲ್ಸ್‌ ಕಾಯಿಲೆ ಆತಂಕ

ಭಟ್ಕಳ -ಹೊನ್ನಾವರ ಎನ್.ಎಚ್-೬೬ರ ಮೇಲೆ ಟಿ.ಎಫ್.ಸಿ. ಹೋಟೆಲ್ ಎದುರಿಗೆ ಅಪಘಾತ ನಡೆದಿದೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಭಟ್ಕಳದಲ್ಲಿ ಕರಾವಳಿ ಕಾವಲು ಪಡೆ ಅಣಕು ಕಾರ್ಯಾಚರಣೆ ಯಶಸ್ವಿ