ಭಟ್ಕಳ (Bhatkal): ಆಟೋ ರಿಕ್ಷಾ (Auto Rickshaw) ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಮೇತ ಬಿದ್ದು ಸವಾರ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಟಗಾರಕೊಪ್ಪದ ಕೂಲಿ ಕಾರ್ಮಿಕ ಮಾದೇವ ಸೋಮಯ್ಯ ಗೊಂಡ (೩೩) ಗಾಯಗೊಂಡವರು. ಆಟೋ ರಿಕ್ಷಾ ಚಾಲಕ ಶಿರಾಲಿ ಚಿತ್ರಾಪುರ (Chitrapura) ರಸ್ತೆಯ ನಿವಾಸಿ ಮಂಜುನಾಥ ಅಣ್ಣಪ್ಪ ಚಿತ್ರಾಪುರ ವಿರುದ್ಧ ಕಟಗಾರಕೊಪ್ಪದ ಹಲ್ಲಂದಿ ನಿವಾಸಿ ಭಾಸ್ಕರ ನಾಗಯ್ಯ ಗೊಂಡ (೪೨) ದೂರು ದಾಖಲಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಬಂಡಿಕಾಶಿ ಇಳಿಜಾರಿನಲ್ಲಿ ಈ ಘಟನೆ ನಡೆದಿದೆ. ಶಿರಾಲಿಯಿಂದ ಕಟಗಾರಕೊಪ್ಪ ಕಡೆಗೆ ಹೊರಟಿದ್ದ ಬೈಕ್‌ಗೆ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾ (Auto Rickshaw) ಡಿಕ್ಕಿಯಾಗಿದೆ. ಪರಿಣಾಮ ಬೈಕ್‌ ಸವಾರನ ತಲೆಗೆ ಗಂಭೀರ ಪೆಟ್ಟು ತಗುಲಿದೆ. ಅಲ್ಲಿಂದ ತೆರಳುತ್ತಿದ್ದ ಭಾಸ್ಕರ ಗೊಂಡ ಮತ್ತಿತರರು ಗಾಯಾಳುವನ್ನು ತಕ್ಷಣ ಶಿರಾಲಿ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ. ನಂತರ ವೈದ್ಯರ ಶಿಫಾರಸಿನ ಮೇರೆಗೆ ಗಾಯಾಳುವನ್ನು ಕುಂದಾಪುರದ (Kundapur) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ :  ಗಣೇಶ ನಾಯ್ಕ ಹೃದಯಾಘಾತದಿಂದ ನಿಧನ