ಶಿವಮೊಗ್ಗ(Shivamogga): ಮಲೆನಾಡಿನಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಮುಂದುವರಿದಿದೆ. ಕಾಡಾನೆ (wild elephant) ದಾಳಿಗೆ ಬಾಳೆ ತೋಟ ಹಾಗೂ ಅಡಿಕೆ ಮರಗಳು ಹಾನಿಯಾದ (plantation damage) ಘಟನೆ ಶನಿವಾರ ತಡರಾತ್ರಿ ತಾಲೂಕಿನ ಪುರದಾಳು ಗ್ರಾಮದ ಬೇಳೂರುನಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶನಿವಾರ ತಡರಾತ್ರಿ ವೇಳೆಗೆ ಮೂರು ಕಾಡಾನೆಗಳು ನಾಗರಾಜ್ ಎಂ.ಡಿ ಹಾಗೂ ಕನ್ನಪ್ಪ ಎಂಬುವವರ ತೋಟದ ಮೇಲೆ ದಾಳಿ ಬೆಳೆ ನಷ್ಟ ಮಾಡಿವೆ (plantation damage). ಅಡಕೆ ಮರಗಳು ಧರೆಗೆ ಉರುಳಿಸಿವೆ. ಬಾಳೆ ಮರಗಳನ್ನು ಮುರಿದು ಹಾಕಿ ತಿಂದಿವೆ. ಕಾಡಾನೆ ಹಾವಳಿಯನ್ನು ತಪ್ಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಹಾಡಹಗಲೇ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು
ಕಳೆದ ಹಲವು ದಿನಗಳ ಹಿಂದೆ ಇದೇ ರೀತಿ ದಾಳಿ ನಡೆಸಿ ಬೆಳೆಗಳನ್ನು ಹಾನಿ ಮಾಡಿದ್ದವು. ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ (forest department) ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ.ಕೇಳಿದರೆ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದೇವೆ ಅಂತ ಉತ್ತರ ನೀಡ್ತಾರೆ.ಗಸ್ತು ತಿರುಗುತ್ತಿದ್ದರೆ ಕಾಡಾನೆಗಳು ಯಾಕೆ ತೋಟ,ಹೊಲಗಳಿಗೆ ನುಗ್ಗುತ್ತಿವೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಪುರದಾಳು ಗ್ರಾಮದ ರಾಜೇಶ್ ಮತ್ತು ಬೀರಪ್ಪ ಹಾಗೂ ಬೇಳೂರು ಗ್ರಾಮದ ಮೈಲಾರ್ ರವಿ ಎಂಬುವವರ ತೋಟಗಳಿಗೆ ನುಗ್ಗಿ ಅಡಿಕೆ-ಬಾಳೆ-. ಜೋಳ, ಕಬ್ಬಿನ ಬೆಳೆಗಳನ್ನು ಹಾನಿ ಮಾಡಿದ್ದವು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.