ಭಟ್ಕಳ (Bhatkal) : ತಾಲೂಕಿನ ಹಾಡುವಳ್ಳಿಯ (Haduvalli) ಕುರಂದೂರು ಬಸವನ ಬಾಯಿ ಶ್ರೀ ಮಹಾಗಣಪತಿ (Mahaganapati) ದೇವಸ್ಥಾನದಲ್ಲಿ ಜ.೧೯ರಂದು ವರ್ಧಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ (Mahaganapati) ಪೂಜೆ ಹಾಗೂ ಪುಣ್ಯಹ ನಡೆಯಲಿದೆ. ೧೧ ಗಂಟೆಗೆ ಅಷ್ಟದ್ರವ್ಯದ ಗಣಹೋಮ, ಪೂರ್ಣಾಹುತಿ ಜರುಗಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಡೆಯಲಿದ್ದು, ನಂತರ ಅನ್ನಸಂತರ್ಪಣೆ ಇಟ್ಟುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ಜ.೧೪ರಿಂದ ಭಂಡೂರು ಜಾತ್ರಾ ಮಹೋತ್ಸವ