ಭಟ್ಕಳ (Bhatkal): ಮುರುಡೇಶ್ವರದಲ್ಲಿ (Murdeshwar) ಸಮುದ್ರ ಪಾಲಾದ (Beach Tragic) ಮೂವರು ವಿದ್ಯಾರ್ಥಿನಿಯರ ಶವ ಇಂದು ಡಿ.೧೧ರಂದು ಕರಾವಳಿ ಕಾವಲುಪಡೆ ತಂಡ (CSP) ಪತ್ತೆಮಾಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರುಡೇಶ್ವರದ (Murudeshwar) ನವೀನ್ ಬೀಚ್ ರೆಸಾರ್ಟ್ ಬಳಿ ಸಮುದ್ರದಲ್ಲಿ ತೇಲುತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾಗಿದ್ದರೆ, ಮತ್ತೊಂದು ಮೃತದೇಹ ಕೂಡ ಕೊಂಚ ದೂರದಲ್ಲೇ ಪತ್ತೆಯಾಗಿದೆ. ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ಮೃತದೇಹ ಪತ್ತೆಯಾಗಿದೆ. ಕರಾವಳಿ ಕಾವಲು ಪಡೆ ತಂಡ ಮೃತದೇಹವನ್ನು ಬೋಟ್ ಮೂಲಕ ಅಳ್ವೆಕೋಡಿ ಬಂದರಿಗೆ ತಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ : Beach Tragedy/ ಮುರ್ಡೇಶ್ವರದಲ್ಲಿ ಮೊಕ್ಕಾಂ ಹೂಡಿದ ಡಿಸಿ, ಎಸ್ಪಿ

ನಿನ್ನೆ ಡಿ.೧೦ರಂದು ಸಮುದ್ರದಲ್ಲಿ ಏಳು ವಿದ್ಯಾರ್ಥಿನಿಯರು ನೀರಿಗೆ ಕೊಚ್ಚಿಕೊಂಡು ಹೋಗಿದ್ದರು. ಆ ಪೈಕಿ ಮೂವರನ್ನು ಲೈಫ್ ಗಾರ್ಡ್ಸ್ ಸಿಬ್ಬಂದಿ ರಕ್ಷಣೆ ಮಾಡಿದ್ರೆ ಶ್ರಾವಂತಿ ಎಂಬಾಕೆ ಸಾವನ್ನಪ್ಪಿದ್ದಳು. ದೀಕ್ಷಾ, ಲಾವಣ್ಯ, ವಂದನಾ ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದರು. ಮುರುಡೇಶ್ವರದಲ್ಲಿ ನಡೆದ ದುರ್ಘಟನೆಯಲ್ಲಿ (Beach Tragic) ಒಟ್ಟು ನಾಲ್ಕು ಮಂದಿ ದಾರುಣ ಸಾವನ್ನು ಕಂಡಿದ್ದಾರೆ. ಶಿಕ್ಷಕರು ಹಾಗೂ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷಕ್ಜೆ ಅಮಾಯಕ ಜೀವಗಳ ಬಲಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Murdeshwar/ ನೀರಲ್ಲಿ ಮುಳುಗಿ ಓರ್ವ ವಿದ್ಯಾರ್ಥಿನಿ ಸಾವು, ಮೂವರು ನಾಪತ್ತೆ