ಭಟ್ಕಳ (Bhatkal) : ಇಲ್ಲಿನ ಬಸ್ತಿ ರಸ್ತೆಯಲ್ಲಿರುವ ಶ್ರೀ ರಘುನಾಥ ದೇವಸ್ಥಾನದಲ್ಲಿ (Raghunath Temple) ವರ್ಷಂಪ್ರತಿಯಂತೆ ಜರುಗುವ ಮಹಾಶಿವರಾತ್ರಿಯ (Mahashivaratri) ಪ್ರಯುಕ್ತ ಸಪ್ತ ಪ್ರಹರ ಭಜನಾ (Bhajane) ಕಾರ್ಯಕ್ರಮವು ಫೆ.೨೬ರಂದು ಬೆಳಿಗ್ಗೆ ೭ ಗಂಟೆಗೆ ಆರಂಭವಾಗಲಿದೆ. ನಾಯಕ ಕುಟುಂಬದವರ ದೀಪ ಸ್ಥಾಪನೆಯಿಂದ ಫೆ.೨೭ರ ಗುರುವಾರ ಬೆಳಿಗ್ಗೆ ೪ ಗಂಟೆಗೆ ದೀಪ ವಿಸರ್ಜನೆ ತನಕ ಈ ಕಾರ್ಯಕ್ರಮ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಫೆ.೨೬ರ ಬೆಳಿಗ್ಗೆ ೭ ಗಂಟೆಗೆ ಸಾಮೂಹಿಕ ಭಜನೆ ನಡೆಯಲಿದ್ದು, ಪ್ರತಿ ಗಂಟೆಗೊಮ್ಮೆ ಜಿಎಸ್‌ಬಿ (GSB) ಸಮಾಜದ ವಿವಿಧ ಕುಟುಂಬಗಳ ಸದಸ್ಯರು ಮತ್ತು ಭಜನಾ ಮಂಡಳಿಗಳು ಪಾಳಿಯಂತೆ ಭಜನಾ (Bhajane) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾತ್ರಿ ೧೦.೩೦ರಿಂದ ಅಷ್ಟಾವಧಾನ ಸೇವೆ, ರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ವರ್ಷಂಪ್ರತಿಯಂತೆ ರಾತ್ರಿ 10-30ಕ್ಕೆ ನಡೆಯುವ ಆಷ್ಟಾವಧಾನ ಸೇವೆಯಲ್ಲಿ ನೃತ್ಯ ಕಾರ್ಯಕ್ರಮ, ಭಜನಾ ಸ್ಪರ್ಧೆ ನಡೆಯಲಿದೆ. ನಸುಕಿನ ಜಾವ ಗಂಟೆಗೆ ದೀಪ ವಿಸರ್ಜನೆ ಜರುಗಲಿದೆ.

ಇದನ್ನೂ ಓದಿ : Padayatra / ೧೫ನೇ ವರ್ಷದ ಪಾದಯಾತ್ರೆ ಆಯೋಜನೆ

ಫೆ.೨೭ರಂದು  ವಿಶೇಷ ಶ್ರೀ ರಾಮ ನಾಮ ಜಪ (Rama Nama Japa) ಅಭಿಯಾನ ನಡೆಯಲಿದೆ. ಮೊದಲನೇ ಪಾಳಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧೨ರ ತನಕ, ಎರಡನೇ ಪಾಳಿ ಮಧ್ಯಾಹ್ನ ೧೨ ರಿಂದ ಮಧ್ಯಾಹ್ನ ೧ರ ವರೆಗೆ ನಡೆಯಲಿದೆ.  ಶ್ರೀ ದೇವರ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಪರ್ವಕಾಲದಂದು ವಿಶೇಷ ಸೇವೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : Love Failure/ ಚಲಿಸುತ್ತಿದ್ದ ಬಸ್ಸಿನಲ್ಲೇ ಯುವಕನ ಬರ್ಬರ ಹತ್ಯೆ