ಭಟ್ಕಳ (Bhatkal): ಯಾರೋ ದುಷ್ಕರ್ಮಿಗಳು ಗೋವನ್ನು ವಧೆ ಮಾಡಿ ತಲೆ ಮತ್ತು ಚರ್ಮವನ್ನು ಬಿಟ್ಟು ಮಾಂಸ ಸಾಗಾಟ ಮಾಡಿಕೊಂಡು ಹೋಗಿರುವ ಘಟನೆ ನಗರದ ಆಸರಕೇರಿ ಸಮೀಪ ಪಾಳು ಬಿದ್ದ ಮನೆಯೊಂದರ ಬಳಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬುಧವಾರ ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಎಲ್ಲಿಂದಲೋ ಜಾನುವಾರುವನ್ನು ತಂದು ಈ ಸ್ಥಳದಲ್ಲಿ ವಧೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : Konkani Parishat/ ಕುಮಟಾದ ಅರುಣ ಉಭಯಕರ ಉತ್ತರಾಧಿಕಾರಿ ಆಯ್ಕೆ

ಸ್ಥಳದಲ್ಲಿ ವಧೆ ಮಾಡಿದ ಜಾನುವಾರಿನ ರುಂಡ, ಚರ್ಮ, ಕಾಲು ಹಾಗೂ ಕರಳಿನ ಅವಶೇಷಗಳು ಪತ್ತೆಯಾಗಿವೆ. ಸ್ಥಳಕ್ಕೆ ಪಶು ವೈದ್ಯರು ಹಾಗೂ ಭಟ್ಕಳ (Bhatkal) ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ರೀಲ್ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸಹಿತ ಇದನ್ನೂ ಓದಿ : sand politics/ ಹಸಿರು ಪೀಠಕ್ಕೆ ಹೋದವರಿಗೆ ಕಾಂಗ್ರೆಸ್‌ ಬೆನ್ನೆಲುಬು