ಭಟ್ಕಳ (Bhatkal): ತಾಲೂಕಿನ ಬಂದರ ರಸ್ತೆಯ ಮುಗ್ದುಂ ಕಾಲೊನಿಯ ಸಮೀಪ ಅಪರಿಚಿತ ಅಸ್ಥಿ ಪಂಜರ ರೂಪದಲ್ಲಿ ಮೃತದೇಹವೊಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ (Bhatkal) ಮುಗ್ದುಂ ಕಾಲೋನಿಯ ವ್ಯಕ್ತಿಯೊರ್ವರು ಹಾರೆಯ ಹಿಡಿಗೋಲಿಗಾಗಿ ಕಟ್ಟಿಗೆ ಹುಡುಕುತ್ತಿದ್ದ ವೇಳೆ ಅಸ್ಥಿಪಂಜರ ಬೆಳಕಿಗೆ ಬಂದಿದೆ. ಹಲವು ತಿಂಗಳ ಹಿಂದೆ ಮೃತಪಟ್ಟಿರುವ ವ್ಯಕ್ತಿಯ ಶವ ಇದಾಗಿದೆ. ನೆಲದಿಂದ ಸುಮಾರು ೧೦ ಅಡಿ ಎತ್ತರದಲ್ಲಿ ನೈಲಾನ್ ಹಗ್ಗದಿಂದ ಶವವು ಮರಕ್ಕೆ ಬಿಗಿದ ಸ್ಥಿತಿಯಲ್ಲಿ ಇದೆ. ದೇಹದಿಂದ ರುಂಡ ಬೇರ್ಪಟ್ಟು ಕೆಳಗೆ ಬಿದ್ದಿದೆ. ಶವದ ಅಡಿಯಲ್ಲಿ ಚಪ್ಪಲಿ ಪತ್ತೆಯಾಗಿದೆ. ಅದರ ಆಧಾರದಲ್ಲಿ ಪುರುಷನ ಶವ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಅಕ್ಟೋಬರ್ ೧ರಂದು ವಿವಿಧೆಡೆ ಅಡಿಕೆ ಧಾರಣೆ
ಮುಖ್ಯ ರಸ್ತೆಯ ಬಳಿಯಲ್ಲಿ ಘಟನೆ ನಡೆದರೂ ಬೆಳಕಿಗೆ ಬರದಿರುವದು ಅಚ್ಚರಿ ಮೂಡಿಸಿದೆ. ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಸ್ಥಳದಲ್ಲಿ ನೂರಾರು ಸಂಖ್ಯೆಯ ಜನರು ಜಮಾವಣೆಗೊಂಡಿದ್ದರು. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ತೆರಳಿ ತನಿಖೆ ಕೈಗೊಂಡಿದ್ದಾರೆ.
ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ನಮ್ಮತನ ಮರೆಯುತ್ತಿರುವ ಹವ್ಯಕರು: ವೇ.ಮೂ. ವಿಷಾದ