ಭಟ್ಕಳ (Bhatkal) : ಪ್ರಚೋದನಾಕಾರಿ ಘೋಷಣೆ ಮತ್ತು ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಹರಡಿಸುವವರ ವಿರುದ್ದ ಭಟ್ಕಳ ಬಿಜೆಪಿ (BJP) ಘಟಕ ಪೊಲೀಸ್‌ ನಿರೀಕ್ಷಕರಿಗೆ ಇಂದು ಶನಿವಾರ ಸಂಜೆ ದೂರು (Complaint) ನೀಡಿದೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ನಿಯೋಗ ಭಟ್ಕಳ ಶಹರ ಠಾಣೆಗೆ ತೆರಳಿ ಪೊಲೀಸ್‌ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೆಲವು ವ್ಯಕ್ತಿಗಳು ಎಸ್.ಡಿ.ಪಿ.ಐ. (SDPI) ಸಂಘಟನೆಯ ಹೆಸರಿನಲ್ಲಿ ನ.೬ರಂದು  ಭಟ್ಕಳದ ತಾಲೂಕು ಪಂಚಾಯತ ಎದುರುಗಡೆ ಪ್ರತಿಭಟನೆ ನಡೆಸಿತ್ತು. ಈ  ಪ್ರತಿಭಟನೆಯಲ್ಲಿ ಸಂಘ ಪರಿವಾರ, ವೀರ ಸಾವರ್ಕರ (Veer Savarkar) ಹಾಗೂ ಇತರ ದೇಶಭಕ್ತ ಸಂಘಟನೆ ಮತ್ತು ವ್ಯಕ್ತಿಗಳ ವಿರುದ್ದ ಪ್ರಚೋದನಾಕಾರಿಯಾಗಿ ಕೋಮು ದ್ವೇಷ ಹರಡಿಸುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಕೋಮು ದ್ವೇಷದ ಘೋಷಣೆಗಳನ್ನು ಹಾಕಿದ್ದಾರೆ ಎಂದು ದೂರಲಾಗಿದೆ (BJP complaint).

ವಿಡಿಯೋ ಸಹಿತ ಇದನ್ನೂ ಓದಿ :   ೧೬೮ ಕೆಜಿ ದನದ ಮಾಂಸ ಅಕ್ರಮ ಸಾಗಾಟ

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವು ವ್ಯಕ್ತಿಗಳು ಈ ಹಿಂದೆ ಪಿ.ಎಫ್.ಐ. (PFI) ಸಂಘಟನೆಯಲ್ಲಿಯೂ ಸಕ್ರಿಯರಾಗಿರುವ ಬಗ್ಗೆ ಗುಮಾನಿ ಇದೆ. ತೌಫಿಕ್ ಬ್ಯಾರಿ ಮತ್ತು ವಾಸಿಂ ಮಣಿಗಾರ ಜೊತೆ ಇನ್ನು ಸುಮಾರು ೫೦ ಜನರು ಪ್ರತಿಭಟನೆಯಲ್ಲಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದಲ್ಲದೆ  ಘೋಷಣೆಗಳನ್ನು ಕೂಗಿದ್ದಾರೆ. ಈ ರೀತಿಯಾಗಿ ಪ್ರಚೋದನಾಕಾರಿಯಾಗಿ ಕೋಮು ದ್ವೇಷ ಹರಡಿಸುವ ರೀತಿಯಲ್ಲಿ ಭಾಷಣ ಮಾಡುವ ಮತ್ತು ಘೋಷಣೆ ಕೂಗುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಹರಡಿಸುವ ಕೃತ್ಯ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಇದನ್ನೂ ಓದಿ :  ಭಟ್ಕಳದ ಶಿಲ್ಪಿ ಸಹಿತ ಇಬ್ಬರಿಗೆ ಗಾಯ

ಈ ದೂರಿನ ಜೊತೆಗೆ  ಎಸ್‌ಡಿಪಿಐ ನಡೆಸಿದ  ಪ್ರತಿಭಟನೆಯ ವಿಡಿಯೊ ಇರುವ ಸಿ.ಡಿ.ಯನ್ನು ಪೊಲೀಸ್‌ ನಿರೀಕ್ಷಕರಿಗೆ ಬಿಜೆಪಿ ಸಲ್ಲಿಸಿದೆ. ನಿಯೋಗದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ರಾಜ್ಯ ಬಿಜೆಪಿ ಹಿಂದುಳಿಗ ವರ್ಗಗಳ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಾಡಿಗ ಮತ್ತು ಶ್ರೀಕಾಂತ ನಾಯ್ಕ, ಭಟ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸಹಿತ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸಹಿತ ಇದನ್ನೂ ಓದಿ :  ವಕ್ಫ್ ಆಸ್ತಿ ಮಾಡಲು ಬಂದ್ರೆ ಜನರೆಲ್ಲಾ ಸೇರಿ ಓಡಿಸಿ