ಭಟ್ಕಳ: ತಾಲೂಕಿನ ಜಾಲಿ ಮತ್ತು ಹೆಬಳೆ ಗ್ರಾಮ ಪಂಚಾಯತಿಗಳನ್ನು ಸೇರಿಸಿ ಅವೈಜ್ಞಾನಿಕವಾಗಿ ಭಟ್ಕಳ ನಗರಸಭೆಯನ್ನು ರಚಿಸಿರುವುದನ್ನು ಖಂಡಿಸಿ, ವಿಧಾನಸಭೆಯಲ್ಲಿ ಚರ್ಚಿಸುವಂತೆ ಭಟ್ಕಳ ಬಿಜೆಪಿ ನಿಯೋಗ (Bhatkal BJP) ಪಕ್ಷದ ರಾಜ್ಯಾಧ್ಯಕ್ಷರನ್ನು (BJP President) ಭೇಟಿ ಮಾಡಿ ಮನವಿ ಮಾಡಿದೆ. ಬೆಂಗಳೂರಿನ (Bengaluru) ಅವರ ಮನೆಯಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (B Y Vijayendra) ಭಟ್ಕಳ ನಿಯೋಗದ (BJP delegation) ಮುಖಂಡರು ಭೇಟಿ ಮಾಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಚಿವ ಮಂಕಾಳ ವೈದ್ಯರು ಚುನಾವಣೆಯಲ್ಲಿ ಒಂದು ಕೋಮಿಗೆ ನೀಡಿದ ಭರವಸೆಯನ್ನು ಈಡೇರಿಸುವುದಕ್ಕಾಗಿ ಭಟ್ಕಳ ಪುರಸಭೆಗೆ ಜಾಲಿ ಮತ್ತು ಹೆಬಳೆ ಪಂಚಾಯತಿಯನ್ನು ಮಾತ್ರ ಸೇರಿಸಿ ಅವೈಜ್ಞಾನಿಕವಾಗಿ ನಗರಸಭೆಯನ್ನಾಗಿಸಿದ್ದಾರೆ ಎಂದು ಭಟ್ಕಳ ಬಿಜೆಪಿ (Bhatkal BJP) ಆರೋಪಿಸಿದೆ. ಇದು ಬಡವರಿಗೆ ಮತ್ತು ಹಿಂದೂ ಸಮಾಜದಕ್ಕೆ ಮಾಡಿದ ದ್ರೋಹವಾಗಿದೆ. ಈಗಾಗಲೇ ಭಟ್ಕಳದಲ್ಲಿ ಸಚಿವ ಮಂಕಾಳ ವೈದ್ಯರ (Minister Mankal Vaidya) ಈ ಷಡ್ಯಂತ್ರವನ್ನು ಖಂಡಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮುಖಂಡರು ತಿಳಿಸಿದರು.

ಇದನ್ನೂ ಓದಿ: Appeal to the Governor/ ನಗರಸಭೆ ಸೇರ್ಪಡೆಗೆ ವಿರೋಧಿಸಿ ರಾಜ್ಯಪಾಲರಿಗೆ ಮನವಿ

ಈ ಹೋರಾಟದ ಮುಂದಿನ ಭಾಗವಾಗಿ, ಬೆಂಗಳೂರು ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿರುವುದರಿಂದ, ಸಚಿವರ ಈ ಷಡ್ಯಂತ್ರದ ಕುರಿತು ಸದನದ ಗಮನಕ್ಕೆ ತಂದು ಭಟ್ಕಳದ ಹಿಂದೂ ಸಮಾಜಕ್ಕೆ ಮತ್ತು ಬಡವರಿಗೆ ನ್ಯಾಯ ವದಗಿಸುವಂತೆ ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ. ಅಭಿವೃದ್ಧಿಯೇ ಮಾನದಂಡವಾಗಿದ್ದರೆ ಜನಸಂಖ್ಯೆಯ ಆಧಾರದ ಮೇಲೆ ನಗರಸಭೆಗೆ ಶಿರಾಲಿ, ಮುಂಡಳ್ಳಿ, ಮಾವಿನಕುರ್ವೆ, ಮುಟ್ಟಳ್ಳಿ, ಯಲ್ವಡಿಕವೂರ ಹೀಗೆ ಹತ್ತಿರದ ಪಂಚಾಯತ್ ಗಳನ್ನು ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಬಹುದು ಎಂದು ರಾಜ್ಯಾಧ್ಯಕ್ಷರಿಗೆ ಮನವರಿಕೆ ಮಾಡಲಾಗಿದೆ. ಈ ಪ್ರಸ್ತಾವನೆಯನ್ನು ಕೈ ಬಿಡುವಂತೆ ವಿಧಾನಸಭೆಯಲ್ಲಿ (Vidhanasabhe) ಆಗ್ರಹಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: Bhatkal Municipal Council/ ಭಟ್ಕಳ ನಗರಸಭೆ ಸೇರಲು ಹೆಬಳೆ ಗ್ರಾ ಪಂ ವಿರೋಧ

ಭಟ್ಕಳ ಬಿಜೆಪಿ ನಿಯೋಗದ ಅಹವಾಲು ಆಲಿಸಿದ ರಾಜ್ಯಾಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿ, ಈ ಕುರಿತು ಸದನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್‌ ಎಸ್ ಹೆಗಡೆ, ಭಟ್ಕಳ ಮಂಡಲದ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಮುಖಂಡರಾದ ಸುಬ್ರಾಯ ದೇವಾಡಿಗ, ಗೋವಿಂದ ನಾಯ್ಕ, ಶ್ರೀನಿವಾಸ ನಾಯ್ಕ, ಶ್ರೀಕಾಂತ್ ನಾಯ್ಕ್, ಉಮೇಶ ನಾಯ್ಕ ಉಪಸ್ಥಿತರಿದ್ದರು.

ಇದನ್ನೂ ಓದಿ: bhatkal bjp pressmeet/ ಸಚಿವ ಮಂಕಾಳ ವೈದ್ಯರಿಂದ ಹಿಂದೂಗಳಿಗೆ ಅನ್ಯಾಯ: ಸುನೀಲ ನಾಯ್ಕ ಆರೋಪ