ಭಟ್ಕಳ: ನಗರದ ಮುಗ್ಗುಂ ಕಾಲೋನಿ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಟಾವು ಮಾಡಿ, ಚರ್ಮ-ಎಲುಬು ಸೇರಿದಂತೆ ಬಿಡಿಭಾಗಗಳನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಿದ ಪ್ರಕರಣಕ್ಕೆ (Bhatkal bone case) ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸೆ ೧೧ರಂದು ಉಪ ವಲಯ ಅರಣ್ಯಾಧಿಕಾರಿ ಮಾರುತಿ ಸೊರಗಾಂವಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆ ೧೭ರಂದು ಡಿವೈಎಸ್ಪಿ ಮಹೇಶ್ ಎಂ ಕೆ ಮಾರ್ಗದರ್ಶನದಲ್ಲಿ, ಪಿಐ ದಿವಾಕರ ಪಿ ಎಮ್ ನೇತೃತ್ವದ ತಂಡವು ಆರೋಪಿಗಳಾದ ಮುಗ್ಗುಂ ಕಾಲೋನಿ ನಿವಾಸಿ ಮೊಹಮ್ಮದ್ ಸಮಾನ್ ಹಾಗೂ ಚೌತನಿಯ ಮೊಹಮ್ಮದ್ ರಾಹೀನ್ ಎಂಬವರನ್ನು ಬಂಧಿಸಿದೆ. ಕೃತ್ಯಕ್ಕೆ ಬಳಸಿದ ವಾಹನವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ: ೨೪ ಗಂಟೆಯೊಳಗೆ ದೇವಳ ಕಳ್ಳರನ್ನು ಪತ್ತೆಹಚ್ಚುವಲ್ಲಿ ಭಟ್ಕಳ ಗ್ರಾಮೀಣ ಪೊಲೀಸರು ಯಶಸ್ವಿ
ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ್ ನಾಯ್ಕ, ಪಿಎಸ್ಐ ತಿಮ್ಮಪ್ಪ ಎಸ್ ಸೇರಿದಂತೆ ಠಾಣೆಯ ಸಿಬ್ಬಂದಿಯವರಾದ ದಿನೇಶ ನಾಯಕ, ದೇವು ನಾಯ್ಕ, ದೀಪಕ ನಾಯ್ಕ, ವಿನಾಯಕ ಪಾಟೀಲ, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ಕಿರಣ ಪಾಟೀಲ್ ಮತ್ತು ರೇವಣಸಿದ್ದಪ್ಪ ಮಾಗಿ ಹಾಗೂ ಜಿಲ್ಲಾ ಪೊಲೀಸ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಉದಯ ಗುನಗಾ ಮತ್ತು ಬಬನ ಕದಂ ಪಾಲ್ಗೊಂಡಿದ್ದರು.
ಇದನ್ನು ಓದಿ: Case filed/ ಭಟ್ಕಳ ಮೂಳೆ ಪ್ರಕರಣಕ್ಕೆ ತಿರುವು: ಪುರಸಭೆ ಮುಖ್ಯಾಧಿಕಾರಿಯಿಂದ ದೂರು
ಈ ನಡುವೆ ಭಟ್ಕಳ ಪುರಸಭೆ ಮುಖ್ಯ ಅಧಿಕಾರಿ ಮೂಳೆ ಪ್ರಕರಣ ನಡೆದೇ ಇಲ್ಲ, ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಇಬ್ಬರ ಬಂಧನದ ನಂತರ ಪುರಸಭೆ ಮುಖ್ಯ ಅಧಿಕಾರಿಯ ದೂರಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಖ್ಯ ಅಧಿಕಾರಿ ಸುಳ್ಳು ದೂರು ದಾಖಲಿಸಿದ್ರಾ? ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಕ್ರಮ ಆಗುತ್ತಾ? ಇತ್ಯಾದಿ ಪ್ರಶ್ನೆಗಳು ಎದ್ದಿವೆ. ಪೊಲೀಸ್ ತನಿಖೆಯ ನಂತರವೇ ಎಲ್ಲದಕ್ಕೂ ಉತ್ತರ ಸಿಗಲಿದೆ.
ಇದನ್ನು ಓದಿ: Cattle bones/ ಗುಡ್ಡದಲ್ಲಿ ಜಾನುವಾರು ಮೂಳೆಗಳು, ಅಸ್ತಿಪಂಜರಗಳು ಪತ್ತೆ



